ವರ್ಧಮಾನ ಶಿಕ್ಷಣ ಸಂಸ್ಥೆಯ ಗೈಡ್ಸ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

- ಸೆ. 10,2026 ರಂದು ಡಾ|ವಿ. ಎಸ್. ಆಚಾರ್ಯ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರ, ಉಡುಪಿ ಇಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಗೀತ ಗಾಯನ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ಗೈಡ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ …ಶ್ರುತಾ ಜೈನ್, ಆತ್ಮಿಕಾ ಕಾಮತ್, ಚಿತ್ರಾ ಪೈ, ಆಧ್ಯಾ ಡಿ.ಎ., ಪ್ರತ್ಯುಷಾ ಕುಂದರ್, ಅನುಷ್ಕಾ ಪ್ರಭು, ಅದಿತ್ರಿಯಾ ಸಿಂಧು, ಸಾಹಿತ್ಯ ಎಸ್, ಭಂಡಾರಿ ಭಾಗವಹಿಸಿರುತ್ತಾರೆ.
ವಿಜೇತ ತಂಡಕ್ಕೆ ವರ್ಧಮಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಶಶಿಕಲಾ ಹೆಗ್ಡೆ , ಆಡಳಿತಾಧಿಕಾರಿ ಕರ್ತವ್ಯ ಜೈನ್, ಕುಮಾರಯ್ಯ ಹೆಗ್ಡೆ, ಗೈಡ್ ಕ್ಯಾಪ್ಟನ್ ಪ್ರಿಯಾ ನಾಯಕ್ ಹಾಗೂ ಶಿಕ್ಷಕ ವೃಂದ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದರು.




































