29.6 C
Udupi
Sunday, September 6, 2026
spot_img
spot_img
HomeBlogವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ, ಶಿಕ್ಷಕರ ದಿನಾಚರಣೆಯಂದು - ಸ್ವಚ್ಛತಾ ಶಿಕ್ಷಣ…

ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ, ಶಿಕ್ಷಕರ ದಿನಾಚರಣೆಯಂದು – ಸ್ವಚ್ಛತಾ ಶಿಕ್ಷಣ…

ಸ್ವಚ್ಛತಾ ಸೇನಾನಿ “ಫೇಲಿಕ್ಸ್ ವಾಸ್ ರವರಿಗೆ ಗೌರವ”

ಕಾರ್ಕಳದ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ‘ಸ್ವಚ್ಛ ಕಾರ್ಕಳ ಬ್ರಿಗೇಡ್’ ತಂಡದೊಂದಿಗೆ ಆಚರಿಸಲಾಯಿತು.

ಕಳೆದ ಎಂಟು ವರ್ಷಗಳಿಂದ ಕಾರ್ಕಳದ ಪರಿಸರವನ್ನು ಸ್ವಚ್ಛವಾಗಿಡುವುದು, ಸ್ವಾತಂತ್ರ್ಯ ಉದ್ಯಾನವನ, ಗೋವಿಗಾಗಿ ಮೇವು, ಸ್ವಚ್ಛತೆ, ಸ್ವಚ್ಛ ಪರಿಸರ.. ಧೇಯವಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಸದಸ್ಯರನ್ನು ವರ್ಧಮಾನ ಶಿಕ್ಷಣ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

ಶಿಕ್ಷಕರಿಗೆ ಗೌರವ ಸಲ್ಲಿಸುವುದರ ಜೊತೆಗೆ, ಸ್ವಚ್ಛತೆ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳು, ಹಸಿಕಸ – ಒಣಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಮಾಡುವುದರಿಂದ ನಮ್ಮ ಪರಿಸರವನ್ನು ಸ್ವಚ್ಛವಾಗಿರಿ ಸಬಹುದು.
ಸ್ವಚ್ಛ ಪರಿಸರವೇ ಆರೋಗ್ಯಕರ ಜೀವನದ ಆಧಾರ ಎಂದು ಕಾರ್ಕಳ ಸ್ವಚ್ಛ ಬ್ರಿಗೇಡ್ ತಂಡದ ಸದಸ್ಯರಾಗಿರುವ ಸುಬ್ರಮಣ್ಯರವರು ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸ್ವಚ್ಛತಾ ಸೇನಾನಿ ಎಂದು ಖ್ಯಾತಿಯನ್ನು ಪಡೆದಿರುವ ಫೇಲಿಕ್ಸ್ ವಾಸ್ ರವರನ್ನು ಗೌರವಿಸಲಾಯಿತು.

ಪರಿಸರ ಸ್ವಚ್ಛವಾಗಿದ್ದರೆ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಬರಲು ಸಾಧ್ಯ….

ಸರ್ವೆಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಣ ತಜ್ಞ ಶಿಕ್ಷಕರಾಗಿ ಅವರು ಸಲ್ಲಿಸಿದ ಅಪಾರ ಸೇವೆಯನ್ನು ನಾವು ಗೌರವಿಸೋಣ ಹಾಗೂ ನಮ್ಮ ಬದುಕಿಗೆ ರೂಪರೇಷೆಯನ್ನು ಹಾಕಿದ ಎಲ್ಲ ಗುರುವರ್ಯರಿಗೂ ವಂದಿಸೋಣ… ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಇದರಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯಲು ಸಾಧ್ಯ ಎಂದು ಪ್ರಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಕೆ ಹೆಗ್ಡೆ ಸ್ವಾಗತಿಸಿದರು.

ಸಂಸ್ಥೆ ಆಡಳಿತಾಧಿಕಾರಿ ಕರ್ತವ್ಯ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರಾಜೇಂದ್ರ ಅಮೀನ್, ಫೆಲ್ಲಿಕ್ಸ್ ವಾಸ್, ಅರ್ಜುನ್ ಕುಮಾರ್, ದಿವ್ಯ ಅರ್ಜುನ್ ಕುಮಾರ್, ವಿಹಾ ಅರ್ಜುನ್, ನಿರಂಜನ್ ಜೈ ನ್, ವಸಂತ್ ಯಂ, ಸಹನಾ ಭಟ್, ಸುರೇಶ್ ಕುಲಾಲ್, ಶ್ರೀನಿವಾಸ ಸುಧಾಳ, ಪ್ರಾರ್ಥನಾ ಜಯರಾಮ್, ಸುಬ್ರಹ್ಮಣ್ಯ ದೇವಾಡಿಗ, ಮಾನಸ ಉಪಾಧ್ಯಾಯ,
ಹಾಗೂ ಕುಮಾರಯ್ಯ ಹೆಗ್ಡೆ ಮತ್ತು ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page