
ಬೈಲೂರು ಜಾರ್ಕಳದಲ್ಲಿ ನೂತನ ಆಡಳಿತದೊಂದಿಗೆ ಹೊಟೇಲ್ ಬ್ಲೂ ಆರ್ಚಿಡ್ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್ ಸೆಪ್ಟೆಂಬರ್ 7ರಂದು ಶುಭಾರಂಭಗೊಳ್ಳಲಿದೆ.
ಕಾಪುವಿನಲ್ಲಿ ಕಳೆದ ಐದು ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಕಾಪು ಮಯೂರ ಹೊಟೇಲ್ ಆಡಳಿತದೊಂದಿಗೆ ಬ್ಲೂ ಆರ್ಚಿಡ್ ಕಾರ್ಯಾರಂಭ ಮಾಡಲಿದೆ.
ಗ್ರಾಹಕರ ಅನುಕೂಲಕ್ಕಾಗಿ ಇಲ್ಲಿ ಗಾರ್ಡನ್ ರೆಸ್ಟೋರೆಂಟ್, ಕೊಠಡಿಗಳು ಹಾಗೂ ಪಾರ್ಟಿ ಹಾಲ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.
ಹೊಟೇಲ್ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾರ್ಸೆಲ್ ಆಹಾರ ಲಭ್ಯವಿರಲಿದೆ. ಅಲ್ಲದೆ, ಹೊಟೇಲ್‌ನಿಂದ 3 ಕಿಲೋಮೀಟರ್ ವ್ಯಾಪ್ತಿಯೊಳಗೆ ಉಚಿತ ಹೋಮ್ ಡೆಲಿವರಿ ಸೌಲಭ್ಯವೂ ಇರಲಿದೆ.
ಸೌತ್ ಇಂಡಿಯನ್, ಕರಾವಳಿ ಶೈಲಿಯ ಖಾದ್ಯಗಳು, ಚೈನೀಸ್, ನಾರ್ತ್ ಇಂಡಿಯನ್ ಹಾಗೂ ತಂದೂರಿ ಸೇರಿದಂತೆ ವಿವಿಧ ಬಗೆಯ ಫುಡ್ ಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಹೊಟೇಲ್ ಬ್ಲೂ ಆರ್ಚಿಡ್ ಆಡಳಿತ ತಿಳಿಸಿದೆ.
ಸೆಪ್ಟೆಂಬರ್ 7ರಂದು ಶುಭಾರಂಭಗೊಳ್ಳುತ್ತಿರುವ ಹೊಟೇಲ್ ಬ್ಲೂ ಆರ್ಚಿಡ್‌ಗೆ ಭೇಟಿ ನೀಡಿ, ವಿಶೇಷ ಆಫರ್‌ಗಳ ಸದುಪಯೋಗ ಪಡೆದುಕೊಳ್ಳಿ.





































