ಶಾಲೆಯಲ್ಲಿ ಕುಸಿದು ಬಿದ್ದು ಮೃತಪಟ್ಟ,6 ವರ್ಷದ ಮಗು.. ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ

ವಿಶಾಖಪಟ್ಟಣ : ಖಾಸಗಿ ಶಾಲೆಯೊಂದರಲ್ಲಿ ,ಹೋಂ ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಆರು ವರ್ಷದ ಮಗುವನ್ನು ಗದರಿಸಿ, ಕೆನ್ನೆಗೆ ಬಾರಿಸಿದ ಕಾರಣ ಮಗು ಅಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಈ ದೃಶ್ಯ ಶಾಲೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ, ಶಿಕ್ಷಕಿ ಮಗುವಿನ ಶರ್ಟ್ ಮತ್ತು ಪ್ಯಾಂಟ್ ಸರಿಪಡಿಸಿ ಕಪಾಳಕ್ಕೆ ಬಾರಿಸಿದ್ದು ಮಗು ಜೋರಾಗಿ ಅಳುತ್ತ ಶಿಕ್ಷಕಿಯ ಬಳಿ ಬೇಡುವಂತೆ ಕೈಗಳನ್ನು ಆಡಿಸುವ ದೃಶ್ಯ ಸೆರೆಯಾಗಿದ್ದು, ಕಪಾಳಕ್ಕೆ ಬಾರಿಸಿದ ಕೆಲವೇ ಕ್ಷಣಗಳಲ್ಲಿ ಮಗು ಆಕೆಯ ಮೇಲೆ ಕುಸಿದು ಬಿದ್ದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಗು ಅಷ್ಟರಲ್ಲಿ ಮೃತಪಟ್ಟಿದೆ. ಪೋಷಕರು ಶಿಕ್ಷಕಿ ನಡೆಸಿದ ಹಲ್ಲೆಯೇ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಧಿಕಾರಿಗಳು ಸಿಸಿಟಿವಿಯ ದೃಶ್ಯಾವಳಿಗಳನ್ನು ಮತ್ತು ಇತರ ಸಾಕ್ಷಾಧಾರಗಳ ಮೂಲಕ ಪರಿಶೀಲನೆ ನಡೆಸಿದ್ದಾರೆ.



















































































