
ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಇಂದು ಭಾನುವಾರ ಬೆಳಿಗ್ಗೆ 6:30ರಿಂದ 8:30ರವರೆಗೆ ಶ್ರೀ ಗುರು ರಾಘವೇಂದ್ರ ಮಠದ ಬಳಿಯಿರುವ ನಾಗಬನದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಆಗಸ್ಟ್ 17ರಂದು ನಡೆಯಲಿರುವ ನಾಗರ ಪಂಚಮಿಯ ಪೂರ್ವಸಿದ್ಧತೆಯಾಗಿ ಈ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಬಾರಿ “ಹಸಿರು ನಾಗರ ಪಂಚಮಿ” ಎಂಬ ಪರಿಕಲ್ಪನೆಯೊಂದಿಗೆ ನಾಗರ ಪಂಚಮಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಪೂಜೆಯ ಸಂದರ್ಭದಲ್ಲಿ ಬಳಸುವ ಹಳದಿ ಪುಡಿಯ ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ಊದುಬತ್ತಿಯ ಪ್ಯಾಕೆಟ್‌ಗಳು ಹಾಗೂ ಇತರ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಪೂಜೆಯ ನಂತರ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಮನವಿ ಮಾಡಲಾಗಿದೆ.
ಭಕ್ತಿ ಇರಲಿ… ಪರಿಸರ ಕಾಳಜಿಯೂ ಇರಲಿ. ಹಸಿರು ನಾಗರ ಪಂಚಮಿ – ನಮ್ಮೆಲ್ಲರ ಸಂಕಲ್ಪ!
ಇಂದಿನ ಅಭಿಯಾನದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಹಲವು ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು.
















































































































