
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸ್ವಚ್ಚ
ಬ್ರಿಗೇಡ್ ಕಾರ್ಕಳ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಹಸಿರು ಸಂವಾದ-
ಸ್ವಚ್ಚತಾ ಸಂವಾದ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಂತಾರಾಷ್ಟ್ರೀಯ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಕಾರ್ಯನಿರ್ವಾಹಕ
ನಿರ್ದೇಶಕಿ ಹಾಗೂ ಪರಿಸರ ವಿಜ್ಞಾನಿ ಪ್ರೊಫೆಸರ್ ಬಿನಿಷಾ ಪಿ ಅವರು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸಂವಾದ ನಡೆಸಿಕೊಟ್ಟರು.
ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಚತಾ
ಕಾರ್ಯಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸ್ವಚ್ಚ
ಕಾರ್ಕಳ ಬ್ರಿಗೇಡ್‌ನ ಡಾ.ಶ್ರೀರಾಮ ಮುಗೆರಾಯ ಅವರು ಪರಿಸರ
ಸಂರಕ್ಷಣೆಯ ಸಮಗ್ರ ಮಾಹಿತಿ ನೀಡಿದರು. ಪರಿಸರ
ಸಂರಕ್ಷಣೆಯೊಂದಿಗೆ ಆರೋಗ್ಯ ರಕ್ಷಣೆ ಎಂಬ ವಿಷಯದಲ್ಲಿ
ಸ್ವಚ್ಚ ಕಾರ್ಕಳ ಬ್ರಿಗೇಡ್‌ನ ಡಾ.ಗುರುರಾಜ್ ಮಾಹಿತಿ ನೀಡಿದರು. ಈ
ಸಂದರ್ಭದಲ್ಲಿ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ
ಲಕ್ಷ್ಮೀ ನಾರಾಯಣ ಕಾಮತ್, ಸ್ವಚ್ಚ ಕಾರ್ಕಳ ಬ್ರಿಗೇಡ್‌ನ ಹಿರಿಯ
ಸದಸ್ಯ ಫ್ಲೆಕ್ಸಿ ವಾಝ್, ರಾಜೇಂದ್ರ ಅಮೀನ್, ಶ್ರೀನಿವಾಸ ಸುಧಾಳ
ಮುಂತಾದವರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ
ದೀಪಕ್ ಕಾರ್ಯಕ್ರಮ ನಿರೂಪಿಸಿದರು.



























































