
ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ 2026-27ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂನ್ 30ರಂದು ಪೆರುವಾಜೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ರೋಟರಿ ಜಿಲ್ಲೆ 3181ರ ವಲಯ-02ರ ಸಹಾಯಕ ಗವರ್ನರ್ ರೊ. ಸಂದೀಪ್ ರಾವ್ ಇಡ್ಯ ಪದಗ್ರಹಣ ಅಧಿಕಾರಿಯಾಗಿ ಸಹಾಯಕ ಗವರ್ನರ್ ನೂತನ ಅಧ್ಯಕ್ಷ ರೊ. ಸುರೇಶ್ ನಾಯಕ್ , ವಲಯ ಸೇನಾನಿ ರೊ. ಕೃಷ್ಣಪ್ರಸಾದ್, ನಿಕಟ ಪೂರ್ವ ಸಹಾಯಕ ಗವರ್ನರ್ ರೊ. ವಿಘ್ನೇಶ್ ಶೆಣೈ , ನಿಕಟ ಪೂರ್ವ ವಲಯ ಸೇನಾನಿ ರೊ. ಪ್ರಶಾಂತ್ ಬೆಳಿರಾಯ, ಕ್ಲಬ್ ನ ಮಾರ್ಗದರ್ಶಕರಾದ ರೊ. ಭರತೇಶ್ ಆದಿರಾಜ ಇವರ ಸಮಕ್ಷಮದಲ್ಲಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ರೊ. ಸುರೇಂದ್ರ ನಾಯಕ್ ಅವರಿಂದ ನೂತನ ಅಧ್ಯಕ್ಷ ಮಂಜುನಾಥ್ ಹೆಗ್ಡೆಯವರಿಗೆ ಪ್ರಭಾರ ವಹಿಸಿದರು.

ನಿಕಟಪೂರ್ವ ಅಧ್ಯಕ್ಷ ರೊ. ಸುರೇಂದ್ರ ನಾಯಕ್ ಸ್ವಾಗತಿಸಿ ಮಾತನಾಡಿದರೆ, ನಿಕಟಪೂರ್ವ ಕಾರ್ಯದರ್ಶಿ ರೊ. ರಾಘವೇಂದ್ರ ಕಾಮತ್ ವಾರ್ಷಿಕ ವರದಿ ವಾಚಿಸಿದರು. ನೂತನ ಅಧ್ಯಕ್ಷರು ಕಾರ್ಯಕಾರಿ ಸಮಿತಿಯನ್ನು ಪರಿಚಯಿಸಿ ಸ್ವೀಕಾರ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯ ರೊ. ರಾಜೇಶ್ ಕುಂಟಾಡಿ ಅವರ ಪತ್ನಿ ವಿದ್ಯಾ ರಾಜೇಶ್ ಅವರಿಗೆ ಪಿಎಚ್‌ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಅಂಗನವಾಡಿಗೆ ಪೀಠೋಪಕರಣಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಗೌರವಿಸಿ, ಆಂಶ್ ಅಶೋಕ್ ಸಾಲ್ಯಾನ್ ಹೆರ್ಮುಂಡೆ ಮತ್ತು ಅನನ್ಯ ಕಾರ್ಕಳ ಈ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೊ. ಸುರೇಶ್ ನಾಯಕ್ ರವರ ಸಂಪಾದಕೀಯದಲ್ಲಿ ಕ್ಲಬ್‌ನ ಬುಲೆಟಿನ್ ‘ಲೋಕಹಿತಂ’ ಅನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿ ರೊ. ಸಂದೀಪ್ ರಾವ್ ಇಡ್ಯ ಅವರು ಪರಿಸರ ಸಂರಕ್ಷಣೆ, ಜಲ ಸಂಪನ್ಮೂಲಗಳ ಮಹತ್ವ ಹಾಗೂ ರೋಟರಿ ಸಂಸ್ಥೆಯ ಸೇವಾ ಕಾರ್ಯಗಳ ಕುರಿತು ಮಾತನಾಡಿದರು.
ಕಾರ್ಯದರ್ಶಿ ಗಣೇಶ್ ಬರ್ಲಾಯ ವಂದಿಸಿದರು. ರೊ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.








































