
ಕಾರ್ಕಳ: ಆಶಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಯ ನೂತನ ಸ್ವಂತ ಕಟ್ಟಡವು ಕಾರ್ಕಳದ ಹೃದಯ ಭಾಗದಲ್ಲಿರುವ ಪ್ರೈಂ ಸಿಟಿ ಸೆಂಟರ್ನಲ್ಲಿ, ಕಾರ್ಯಾರಂಭಗೊಳ್ಳಲಿದ್ದು ಇದರ “ಸಮ್ಮಿಲನ ಸಮಾರಂಭ” ವು ಮೇ 22ರಂದು ಸಂಜೆ 5.30ರಿಂದ 7.30, ಶ್ರೀ ವಿಜಯ ನೂತನ ಕಚೇರಿ ಇಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ವಿ. ಸುನಿಲ್ ಕುಮಾರ್ ಪಾಲ್ಗೊಳ್ಳಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.
ಈ ನೂತನ ಶಾಖೆಯಲ್ಲಿ 3200 ಚದರ ಅಡಿ ವಿಸ್ತೀರ್ಣದ ಆಧುನಿಕ ಕಚೇರಿ, ಕೇಂದ್ರೀಕೃತ ಎಸಿ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ, ಲಾಕರ್ ವ್ಯವಸ್ಥೆ, ಗ್ರಾಹಕರಿಗೆ ಪ್ರತ್ಯೇಕ ಸೇವಾ ಕೌಂಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಂಘ ತಿಳಿಸಿದೆ.
ಸಂಸ್ಥೆಯು ಗ್ರಾಹಕರಿಗೆ ಆಕರ್ಷಕ ಠೇವಣಿ ಯೋಜನೆಗಳನ್ನು ಪರಿಚಯಿಸಿದ್ದು, 7.5 ಶೇಕಡದಿಂದ 10.25 ಶೇಕಡದವರೆಗೆ ಬಡ್ಡಿದರ ಘೋಷಿಸಿದೆ. ಹಿರಿಯ ನಾಗರಿಕರು ಹಾಗೂ ಸಂಘದ ಸದಸ್ಯರಿಗೆ ಹೆಚ್ಚುವರಿ ಬಡ್ಡಿ ಸೌಲಭ್ಯವೂ ಇರಲಿದೆ ಎಂದು ತಿಳಿಸಿದೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯು ಮನವಿ ಮಾಡಿದೆ.



























