
ಏಪ್ರಿಲ್ 26, 2026ರಂದು ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಸಂಜೆ 6 ಗಂಟೆಗೆ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಲ್ಲೂರು ಬಲ್ಲಾಳ್ ಕಟ್ಟೆ “ಲಕ್ಷ್ಮೀ ನಿವಾಸ”ದ ಮುಂಭಾಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನ ನಡೆಯಲಿದೆ. ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ನಲ್ಲೂರಿನ ಬಲ್ಲಾಳ್ ಬೆಟ್ಟು ಶ್ರೀಮತಿ ಯಶೋಧ ಶೆಟ್ಟಿ ಮತ್ತು ಸಹೋದರರ ವತಿಯಿಂದ ಹರಕೆಯ ಬಯಲಾಟವಾಗಿ ಆಡಿ ತೋರಿಸಲಿದ್ದು ಭಕ್ತರಿಗೆ ಮನರಂಜನೆ ಜೊತೆಗೆ ಭಕ್ತಿ ಭಾವನೆ ಮೂಡಿಸುವ ಉದ್ದೇಶ ಹೊಂದಿದೆ.
ಈ ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಸಂಜೆ 6 ಗಂಟೆಗೆ ಚೌಕಿ ಪೂಜೆ ನಡೆಯಲಿದ್ದು, ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ವ್ಯವಸ್ಥೆಯೂ ಇರಲಿದೆ.


































