
ಬೆಂಗಳೂರು, ಏಪ್ರಿಲ್ 22: ನಗರದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ತರಕಾರಿ ಬೆಲೆಗಳೂ ಏರಿಕೆಯಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರತಿ ಕೆಜಿ ತರಕಾರಿಗಳ ದರದಲ್ಲಿ ₹10ರಿಂದ ₹40ರವರೆಗೆ ಹೆಚ್ಚಳ ಕಂಡುಬಂದಿದೆ.
ಬಿಸಿಲಿನ ಪರಿಣಾಮದಿಂದ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಸರಬರಾಜು ಕುಸಿದಿದೆ. ಜೊತೆಗೆ ಹೋಟೆಲ್ ಹಾಗೂ ಕಾರ್ಯಕ್ರಮಗಳ ಬೇಡಿಕೆ ಹೆಚ್ಚಿರುವುದೂ ದರ ಏರಿಕೆಗೆ ಕಾರಣವಾಗಿದೆ. ಬೀನ್ಸ್ ದರ ಕೆಜಿಗೆ ₹100 ತಲುಪಿರುವುದು ಗಮನಾರ್ಹವಾಗಿದೆ.
ಬೆಲೆ ಏರಿಕೆಯಿಂದ ಖರೀದಿ ಕುಂಠಿತವಾಗಿದ್ದು, ವ್ಯಾಪಾರಿಗಳಿಗೂ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ಉಷ್ಣ ಅಲೆ ಮುಂದುವರಿದರೆ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಮಾರುಕಟ್ಟೆಯಲ್ಲಿನ ದರಗಳು ಮತ್ತು ಕಳೆದ ವಾರದ ದರಗಳ ವ್ಯತ್ಯಾಸ:
ಟೊಮೆಟೊ – 35 – 20
ಕ್ಯಾರೆಟ್ – 80 – 40
ಹೂಕೋಸು 1ಕ್ಕೆ – 20 – 10
ಗೆಡ್ಡೆಕೋಸು – 60 – 30
ಮೂಲಂಗಿ – 60 – 40
ಬೀನ್ಸ್ – 100 – 50
ಬದನೆಕಾಯಿ – 50 – 40
ಆಲೂಗಡ್ಡೆ – 50 – 30
ಹಾಗಲಕಾಯಿ – 60 – 40
ಹೀರೆಕಾಯಿ – 50 – 30
ದಪ್ಪಮೆಣಸಿನಕಾಯಿ – 60 – 40
ಬೀಟ್ರೂಟ್ – 60 – 40













