29.1 C
Udupi
Monday, April 20, 2026
spot_img
spot_img
HomeBlogರಾಜಾಪುರ ಸಾರಸ್ವತ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಪ್ರಗತಿಯ ಪಥದಲ್ಲಿ, ಮೂರು ದಶಕ ಸಂಸ್ಥೆಯ ಉಗಮ...

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಪ್ರಗತಿಯ ಪಥದಲ್ಲಿ, ಮೂರು ದಶಕ ಸಂಸ್ಥೆಯ ಉಗಮ ಮತ್ತು ವಿಸ್ತರಣೆ

1996- ಏಪ್ರಿಲ್ ನಲ್ಲಿ ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಂದು ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಕಾರ್ಕಳದ ಜೋಡು ರಸ್ತೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ ಪಸ್ತುತ ಕುಕ್ಕುಂದೂರು, ಅಜೆಕಾರು,ಹೆಬ್ರಿ, ಬೆಮ್ಮಣ್, ಮೂಡುಬೆಳ್ಳೆ ಪೆರ್ಡೂರು, ಬೈಲೂರು ಮತ್ತು ಬಜೆಗೋಳಿ ಸೇರಿದಂತೆ 8 ಶಾಖೆಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಪೈಕಿ 4 ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿರುವುದು ಸಂಸ್ಥೆಯ ಭದ್ರತೆಗೆ ಸಾಕ್ಷಿಯಾಗಿದೆ.

ಮೂಲಸೌಕರ್ಯ ಮತ್ತು ಸುಸಜ್ಜಿತ ಸೌಧ: ಸಂಸ್ಥೆಯು ತನ್ನ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, 2006 ರಲ್ಲಿ ಕೇಂದ್ರ ಕಛೇರಿ ನಿರ್ಮಾಣ ಮತ್ತು 2016 ರಲ್ಲಿ ಜೋಡು ರಸ್ತೆಯ ಕೇಂದ್ರ ಕಚೇರಿಯಲ್ಲಿ 600 ಆಸನ ಸಾಮರ್ಥ್ಯವುಳ್ಳ ಸುಸಜ್ಜಿತ ಭವ್ಯವಾದ ಸಭಾಭವನವನ್ನು ನಿರ್ಮಿಸಿದೆ. ಇದೀಗ ಕೇಂದ್ರ ಕಚೇರಿಯ ಪಾರ್ಶ್ವದಲ್ಲಿಯೇ ಸುಮಾರು 45,000 ಚದರ ಅಡಿಯ ಬೃಹತ್ ವಿಸ್ತೀರ್ಣವಾದ ಅತ್ಯಾಕರ್ಷಕವಾದ “ಸಹಕಾರ ಸಿಂಧೂರ” ಎಂಬ ಕಟ್ಟಡವು ಲೋಕಾರ್ಪಣೆಗೆ ಸಿದ್ದಗೊಂಡು ಇದೇ ಏಪ್ರಿಲ್ 26ರಂದು ಗಣ್ಯಾತಿಗಣ್ಯರ ದಿವ್ಯ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ. ಈ ಸೌಧವು ಸಂಸ್ಥೆಯ ಮೈಲಿಗಲ್ಲು. ಪ್ರಸ್ತುತ ಸೊಸೈಟಿ ಸುಮಾರು 254 ಕೋಟಿ ಠೇವಣಿಯೊಂದಿಗೆ 5.02 ಕೋಟಿ ಲಾಭ, ಪ್ರತಿ ವರ್ಷ 18% ನೀಡುತ್ತಿದ್ದು ಗ್ರಾಹಕರಲ್ಲಿ ನಂಬಿಕೆಯನ್ನು ಹೆಚ್ಚಿಸಿದೆ.

ಗೌರವ ಮತ್ತು ಸಾಮಾಜಿಕ ಕೊಡುಗೆ: ಈ ಸಂಸ್ಥೆಗೆ ಸಹಕಾರ ಇಲಾಖೆ ವತಿಯಿಂದ ಜಿಲ್ಲಾ, ರಾಜ್ಯಮತ್ತು ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಸಂಸ್ಥೆಯ ಹಿಂದೆ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ಇವರ ಮತ್ತು ಕಾರ್ಯನಿರ್ವಹಣಾಧಿಕಾರಿಗಳು, ಪದಾಧಿಕಾರಿಗಳು, ನಿರ್ದೇಶಕರು, ಸಿಬ್ಬಂದಿ ವರ್ಗದವರ ಪರಿಶ್ರಮವಿದ್ದು, ಪ್ರತಿಯೊಂದು ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ನಗುಮೊಗದ ಸೇವೆಯೇ ಗ್ರಾಹಕರಿಗೆ ಸಂತೃಪ್ತಿ ತರುತ್ತಿದೆ. ಅಲ್ಲದೆ ಪ್ರತಿವರ್ಷ ಈ ಸೊಸೈಟಿ ವಿದ್ಯಾರ್ಥಿ ಗಳಿಗೆ ನೀಡುತ್ತಿರುವ ಸ್ಕಾಲರ್ಶಿಪ್, ಶಾಲಾ ಪರಿಕರಗಳು, ಸ್ಕೂಲ್ ಬ್ಯಾಗ್ ಬೇರೆ ಇನ್ನಿತರ ಯಾವುದೇ ಸಂಸ್ಥೆಯಿಂದ ಸಿಗುವುದಿಲ್ಲ ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ 25 ಲಕ್ಷಕ್ಕೂ ಮಿಕ್ಕಿ ಸಮಾಜ ಮುಖಿ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದು, ಬೇರೆ ಎಲ್ಲಾ ಸಹಕಾರಿ ಸಂಘಗಳಿಗಿಂತ ವಿಷೇಷತೆ. ಇಲಾಖಾ ಲೆಕ್ಕ ಪರಿಶೋಧನೆಯಲ್ಲಿ” ಎ” ವರ್ಗದ ಸಹಕಾರಿ ಸಂಘವೆಂದು ಗುರುತಿಸಿಕೊಂಡಿರುವುದು ಹೆಮ್ಮಯ ವಿಚಾರ.

“ಸಹಕಾರ ಸಿಂಧೂರ”ದಲ್ಲಿ ಈಗಾಗಲೇ ಭಾರತ್ ಸಿನಿಮಾ, ವಿಶಾಲ್ ಮೆಗಾಮಾರ್ಟ್, ಎನ್ ಪಿ ಎಲೆಕ್ಟ್ರಾನಿಕ್ಸ್ ಕಾರ್ಯಾರಂಭಗೊಳ್ಳಲಿದ್ದು, ಈ ಸಂಸ್ಥೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಒಟ್ಟು 44 ಮಂದಿ ಸಿಬ್ಬಂದಿಗಳು, 20 ಪಿಗ್ಗಿ ಸಂಗ್ರಹಕರು, ಅನೇಕ ತಾಂತ್ರಿಕ ಸಲಹೆಗಾರರು ಇವರೆಲ್ಲರ ಪ್ರಾಮಾಣಿಕ ಸೇವೆಯಿಂದ ಇಂದು ರಾಜಾಪುರ ಸಾರಸ್ಕೃತ ಸೊಸೈಟಿ, ದೇಶದಾದ್ಯಂತ ವಿಸ್ತಾರವಾಗಿ ಬೆಳೆಯುತ್ತಾ ದಾಪುಗಾಲು ಹಾಕುತ್ತಿದೆ.

ಶ್ರೀಮತಿ ಸುಲೋಚನ,ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page