
- ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 01/04/2026ರಿಂದ 04/04/2026ರವರೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ರಾಧಾ ಶೆಣೈ ಹಾಗೂ ಶ್ರೀಮತಿ ಸುನೀತಾ ಉದಯ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ಧ್ಯಾನ ತರಬೇತಿ ಕಾರ್ಯಕ್ರಮವು ನಡೆಯಿತು. ಇದರ ಮೂಲಕ ಆಳವಾದ ಧ್ಯಾನ,ಮೌನ ಅನುಭವ,ಪ್ರಾಣಾಯಾಮ, ಉಸಿರಾಟದ ತಂತ್ರಗಳು, ಮತ್ತು ಯೋಗ ತರಬೇತಿಗಳನ್ನು ನೀಡಲಾಯಿತು.
- ಶಾಲೆಯ ಎಲ್ಲಾ ಶಿಕ್ಷಕಿಯರು ಇದರ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಹಾಗೂ ಶಿಕ್ಷಕ ವೃಂದದವರು ಉಪಸ್ತಿತರಿದ್ದರು.









