24.9 C
Udupi
Monday, February 16, 2026
spot_img
spot_img
HomeBlogವಿಜೇತ ವಿಶೇಷ ಶಾಲೆಯಲ್ಲಿ, ರಾಷ್ಟ್ರೀಯ ಸೇವಾ ಯೋಜನೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ...

ವಿಜೇತ ವಿಶೇಷ ಶಾಲೆಯಲ್ಲಿ, ರಾಷ್ಟ್ರೀಯ ಸೇವಾ ಯೋಜನೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕ ವಿಶೇಷ ಶಿಬಿರ 2025 – 26 ಉದ್ಘಾಟನೆ

spot_imgspot_img

ರಾಷ್ಟ್ರೀಯ ಸೇವಾ ಯೋಜನೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ವಿ. ಸುನಿಲ್ ಕುಮಾರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಶ್ರೀವರ್ಮ ಅಜ್ರಿ ಎಂ, ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಮೋಹನ್, ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತಿ ಕಿಣಿ, ರವಿಕುಮಾರ್ ಶೆಟ್ಟಿ ಕೊಡಿಯಾಲುಬೈಲು, ಶ್ರೀಮತಿ ದಿವ್ಯಾ ನಾಯಕ್, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಕೊಡವೂರು, ವಿಜೇತ ವಿಶೇಷ ಶಾಲಾ ಸ್ಥಾಪಕರಾದ ಡಾ. ಕಾಂತಿ ಹರೀಶ್, ಎನ್ ಎಸ್ ಎಸ್ ಕಾರ್ಡಿನೇಟರ್ ಪ್ರೊಫೆಸರ್ ಚಂದ್ರಕಾಂತ್ ಶೆಣೈ,ಪ್ರೊಫೆಸರ್ ರೇಣುಕಾ ಎಚ್ ಜಿ, ಪ್ರೊಫೆಸರ್ ವಿನಯ್ ಎಂ ಎಸ್ ಉಪಸ್ಥಿತರಿದ್ದರು.

ಎನ್ ಎಸ್ ಎಸ್ ಶಿಬಿರಾರ್ಥಿ ಗಳೊಂದಿಗೆ ಶಿಬಿರದ ಕಾರ್ಯದರ್ಶಿ ಸೃಜನ್, ನವನೀತ್, ಚಿರಾಗ್, ಶರವಣ್, ಅನನ್ಯ, ಪೂರ್ಣ, ಅಕ್ಷತಾ, ಪ್ರೇಕ್ಷ, ಕಾರ್ಯಕ್ರಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು ಪ್ರೇಕ್ಷ ಕಾರ್ಯಕ್ರಮ ನಿರೂಪಿಸಿ, ಪೂರ್ಣ ಸ್ವಾಗತಿಸಿ, ಅನನ್ಯ ವಂದಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page