
ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರಣ ದೇಶದಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದು, ರಾಜ್ಯ ಸೇರಿದಂತೆ ಹಲವೆಡೆ ಗ್ಯಾಸ್ ಸಿಲಿಂಡರ್ ನ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇದೀಗ ಗ್ಯಾಸ್ ಆತಂಕದ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ ಎರಡು ರೂಪಾಯಿ ಏರಿಕೆಯಾಗಿದೆ.
ಶೆಲ್ ಪೆಟ್ರೋಲ್ ಪೂರೈಕೆದಾರರು ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಿದೆ. ಲೀ. 106 ಇದ್ದ ಪೆಟ್ರೋಲ್ 108.50 ಗೆ ಏರಿಕೆಯಾಗಿದೆ. 91 ರೂ. ಇದ್ದ ಡಿಸೆಲ್ ದರ ಇದೀಗ 93.50 ಏರಿಕೆ ಮಾಡಲಾಗಿದೆ.
ಶೆಲ್ ಪೆಟ್ರೋಲ್ ಮಾತ್ರವಲ್ಲದೆ, ಇದೀಗ ಇತರ ಪೂರೈಕೆದಾರರು ಪೆಟ್ರೋಲ್ ಹಾಗೂ ಡೀಸೆಲ್ ಬೇರೆ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.






















































