
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ.
ಬೆಂಗಳೂರು ,ಕಲಬುರಗಿ ರಾಯಚೂರು, ಬಳ್ಳಾರಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಇದೀಗ ಹವಮಾನ ಇಲಾಖೆ ಕಲಬುರಗಿ ,ರಾಯಚೂರು ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.
ಜನರು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೆಚ್ಚಾಗಿ ಹೊರಗೆ ಬರದೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಮಂಗಳೂರು ಉಡುಪಿ ಭಾಗದಲ್ಲೂ ತಾಪಮಾನ ಹೆಚ್ಚಿರಲಿದೆ.
ಮಲೆನಾಡು ಭಾಗಗಳಾದ ಕೊಡಗು, ಶಿವಮೊಗ್ಗದಲ್ಲಿ ಮೋಡಕವಿದ ವಾತಾವರಣವಿದ್ದು ,ಸಣ್ಣಗೆ ಮಳೆಯ ಸಾಧ್ಯತೆ ಇದೆ.






















































