14 ಕೆಜಿ ಗೃಹ ಬಳಕೆಗೆ ಬದಲಾವಣೆ ಇಲ್ಲ

ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಹೊಡೆತ ಜನಸಾಮಾನ್ಯರ ಮೇಲೆ ಭಾರಿ ಪರಿಣಾಮ ಬೀರುತ್ತಿದ್ದು ಇದೀಗ ಕೇಂದ್ರ ಬಜೆಟ್‌ಗೂ ಮುನ್ನವೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿವೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿಕೊಂಡಿದ್ದು ಈ ಮೂಲಕ ಎಲ್‌ಪಿಜಿ ಗ್ರಾಹಕರಿಗೆ ಹೊಡೆತ ನೀಡಿವೆ.
ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,740.50 ರೂ., ಮುಂಬೈನಲ್ಲಿ ಪರಿಷ್ಕೃತ ಬೆಲೆ 1,692 ರೂ., ಕೋಲ್ಕತ್ತಾದಲ್ಲಿ 1,844.50 ರೂ.ಗೆ ಏರಿದ್ದರೆ, ಚೆನ್ನೈನಲ್ಲಿ ಈಗ 1,899.50 ರೂ. ಇದೆ.



















