26.7 C
Udupi
Sunday, March 15, 2026
spot_img
spot_img
HomeBlogಸಾಣೂರು : ಪಮ್ಮನಾಡಿಗುತ್ತು ಮನೆತನದಲ್ಲಿ ಮಾ.23ರಿಂದ 26 ರ ವರೆಗೆ ಧರ್ಮದೈವಗಳ ನೂತನ ಪ್ರತಿಷ್ಠೆ ಹಾಗೂ...

ಸಾಣೂರು : ಪಮ್ಮನಾಡಿಗುತ್ತು ಮನೆತನದಲ್ಲಿ ಮಾ.23ರಿಂದ 26 ರ ವರೆಗೆ ಧರ್ಮದೈವಗಳ ನೂತನ ಪ್ರತಿಷ್ಠೆ ಹಾಗೂ ನೇಮೋತ್ಸವ

ಸಾಣೂರು : ಮಾರ್ಚ್ 23 ರಿಂದ 26 ತನಕ ಪಮ್ಮನಾಡಿಗುತ್ತು ಮನೆತನದ ಶ್ರೀ ಕೊಡಮಣಿತ್ತಾಯಿ ಧರ್ಮದೈವದ ನೂತನ ಪ್ರತಿಷ್ಠೆ ಮಹೇಷಂದಾಯ, ರಕ್ತೇಶ್ವರಿ, ದುಗ್ಗಲಾಯಿ, ಹೌಟಲ್ದಾಯ, ಗುಳಿಗ ಪಂಜುರ್ಲಿ, ನೀಚ ಬೊಬ್ಬರ್ಯ ಧರ್ಮದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಧರ್ಮ ನೇಮೋತ್ಸವ ನಡೆಯಲಿದೆ.

ಮಾರ್ಚ್ 25 ಬುಧವಾರದಂದು ಬೆಳಿಗ್ಗೆ 9.56 ಕ್ಕೆ , ಧರ್ಮ ದೈವಗಳ ಪುನರ್ ಪ್ರತಿಷ್ಠೆ ಹಾಗೂ 11:31ಕ್ಕೆ ಸರಿಯಾಗಿ ಮಿಥುನ ಲಗ್ನದ ಸುಮಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಧರ್ಮದೈವಗಳಿಗೆ ಪರ್ವಸೇವೆ, ಕೊಡಮಣಿತ್ತಾಯಿ ದೈವದ ಅಮೃತವಾಕ್ಯ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 1:00 ಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಮಾರ್ಚ್ 25 ಬುಧವಾರದಂದು ರಾತ್ರಿ 9:00ಗೆ ಶ್ರೀ ಕೊಡಮಣಿತ್ತಾಯಿ ಧರ್ಮದೈವದ ನೇಮೋತ್ಸವ, ರಾತ್ರಿ 12:00 ರಿಂದ ಮಹಿಷಂದಾಯ, ರಕ್ತೇಶ್ವರಿ, ದುಗ್ಗಲಾಯಿ ಧರ್ಮದೈವಗಳ ನೇಮೋತ್ಸವ ನಡೆಯಲಿದೆ.

ಮಾರ್ಚ್ 26 ರ ಗುರುವಾರದಂದು ರಾತ್ರಿ 8ರಿಂದ ಹೌಟಲ್ದಾಯ ಧರ್ಮದೈವಗಳ ನೇಮೋತ್ಸವ ಹಾಗೂ ರಾತ್ರಿ 11 ರಿಂದ ಗುಳಿಗ ಪಂಜುರ್ಲಿ, ನೀಚ ಬೊಬ್ಬರ್ಯ ಧರ್ಮದೈವಗಳ ನೇಮೋತ್ಸವ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪಮ್ಮನಾಡಿಗುತ್ತು ಮನೆತನದ ಕುಟುಂಬಸ್ಥರು ಆಹ್ವಾನ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page