
ಕಾರ್ಕಳ: ದಿನಾಂಕ 26.2.2026ರಂದು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಹೊಸ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ನ ಉದ್ಘಾಟನೆ ನಡೆಯಿತು.
ಶಾಲೆಯ ಮಾರ್ಗದರ್ಶಕರೂ ಮತ್ತು ಕೋಶಾಧಿಕಾರಿಗಳೂ ಆಗಿರುವ ಶ್ರೀಯುತ ದಿನೇಶ್ ಕಾಮತ್ ಅವರು ಕೋರ್ಟ್ ನ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣಕ್ಕೆ ಕೊಡುಗೆಯನ್ನು ನೀಡಿದ ಶಾಲಾ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.





















































