ಜ್ಞಾನಸುಧ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸುಧಾಕರ್ ಶೆಟ್ಟಿ ಸಂತಾಪ

ವೃತ್ತಿಯಿಂದ ನ್ಯಾಯವಾದಿಯಾಗಿ ,ಸಮಾಜಮುಖಿ ಕೆಲಸದಲ್ಲಿ ಸಕ್ರಿಯವಾಗಿರುವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನಮ್ಮೆಲ್ಲರ ಮಾರ್ಗದರ್ಶಕರು ಆಗಿದ್ದ ಎಂ.ಕೆ ವಿಜಯಕುಮಾರ್ ನಮ್ಮನ್ನು ಅಗಲಿರುವುದು ಅತ್ಯಂತ ದುಃಖದ ಸಂಗತಿ ಎಂದು ಡಾ. ಸುಧಾಕರ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
ಶ್ರೀಯುತರ ಅಗಲುವಿಕೆ ತುಂಬಲಾರದ ನಷ್ಟ, ಅವರ ಕುಟುಂಬ ಮತ್ತು ಬಂಧು ವರ್ಗಕ್ಕೆ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎನ್ನುವ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಸುಧಾಕರ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.



















