ಹುಕ್ರಟ್ಟೆ ಮರ್ದಿನಿ ನಿಲಯ ಜಯರಾಮ್ ಶೆಟ್ಟಿ ಮತ್ತು ರತ್ನ ದಂಪತಿಯ ಪುತ್ರ ಪುನೀತ್ ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ

ಐ.ಸಿ.ಎ.ಐ ನಡೆಸಿದ 2026ರ ಮೇ- ಸಿಎ ಅಂತಿಮ ಪರೀಕ್ಷೆಯಲ್ಲಿ ಹುಕ್ರಟ್ಟೆ ಮರ್ದಿನಿ ನಿಲಯ ಮನೆಯ ಜಯರಾಮ್ ಶೆಟ್ಟಿ ಮತ್ತು ರತ್ನ ದಂಪತಿಯ ಪುತ್ರ ಪುನೀತ್ ಶೆಟ್ಟಿ ಅತ್ಯುತ್ತಮ
ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಕೊಡಂಗೈ ಶಾಲೆಯಲ್ಲಿ ಪಡೆದಿದ್ದು ,ಪ್ರೌಢಶಾಲೆಯನ್ನು ಚೌಕಿಯಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದು, ಪಿಯು ಶಿಕ್ಷಣ ವನ್ನು ಬಜಗೋಳಿಯಲ್ಲಿ ಮತ್ತು ಪದವಿ ಶಿಕ್ಷಣವನ್ನು ಎಂ.ಪಿ.ಎಂ ಕಾಲೇಜ್ ಕಾರ್ಕಳ ಇಲ್ಲಿ ಪೂರೈಸುತ್ತಾರೆ.
ಕಾರ್ಕಳದ ಸಿಎ. ಪ್ರಭಾತ್ ಕುಮಾರ್ ಅವರಿಂದ ಸಿಎ ಪರೀಕ್ಷಾ ತರಬೇತಿ ಪಡೆದಿರುತ್ತಾರೆ.

































