
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ವಿದೇಶಗಳ ಮೇಲಿನ ಸುಂಕ ಸಮರ ಮುಂದುವರೆಯುತ್ತಲೇ ಇದ್ದು ಇದೀಗ ವಿದೇಶಗಳ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಅಮೆರಿಕದ ಚಲನಚಿತ್ರ ವ್ಯವಹಾರವನ್ನು ವಿದೇಶಿ ಸ್ಪರ್ಧಿಗಳು ಆಕ್ರಮಿಸಿಕೊಂಡಿದ್ದಾರೆ. ಮಕ್ಕಳಿಂದ ಕ್ಯಾಂಡಿ ಕದಿಯುವ ರೀತಿಯಲ್ಲಿ ಅಮೆರಿಕದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಇತರೆ ದೇಶಗಳು ಕದ್ದಿವೆ ಎಂದು ತಿಳಿಸಿದ್ದು ಅಮೆರಿಕನ್ ಚಲನಚಿತ್ರೋದ್ಯಮವು ಅತ್ಯಂತ ವೇಗವಾಗಿ ಸಾಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಾಣಿಜ್ಯ ಇಲಾಖೆ ಮತ್ತು ಯುಎಸ್ ವ್ಯವಹಾರ ಪ್ರತಿನಿಧಿಗೆ ಟ್ರಂಪ್ ವಿದೇಶ ಚಲನಚಿತ್ರಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರ ನೀಡಿದ್ದಾರೆ.
ಟ್ರಂಪ್ ಕ್ರಮವು ಹಾಲಿವುಡ್‌ಗೆ ಮತ್ತಷ್ಟು ಸಮಸ್ಯೆ ಆಗಲಿದೆ. ಡಿಸ್ನಿ, ಪ್ಯಾರಾಮೌಂಟ್ ಮತ್ತು ವಾರ್ನರ್ ಬ್ರದರ್ಸ್ ಸೇರಿದಂತೆ ಅನೇಕ ಯುಎಸ್ ಸ್ಟುಡಿಯೋಗಳು ವೆಚ್ಚವನ್ನು ಕಡಿತಗೊಳಿಸಲು ಆಗಾಗ್ಗೆ ವಿದೇಶಗಳಲ್ಲಿ ಚಿತ್ರೀಕರಣ ಮಾಡುತ್ತವೆ. ಇದರಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



















