
ಅಲೆವೂರು ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿಯಾದ, ಪ್ರಸ್ತುತ ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿದ್ದ ವಾರಿಜಾ ಎಸ್ ಶೆಟ್ಟಿ ಟೀಚರ್ ಅವರು ಸೆ. 8ರಂದು ಅಪರಾಹ್ನ ನಿಧನ ಹೊಂದಿದ್ದಾರೆ.
82 ವರ್ಷ ವಯಸ್ಸಿನ ವಾರಿಜಾ ಟೀಚರ್ ಅವರು ಶಾಲಾ ಗೌರವಾಧ್ಯಕ್ಷರಾಗಿದ್ದು ಶಾಲಾ ಸಂಚಾಲಕರಾದ ಕಾರ್ಕಳದ ಆಯುರ್ವೇದ ವೈದ್ಯ ಡಾ. ಎಂ ರವಿರಾಜ್ ಶೆಟ್ಟಿ ಅವರ ಹಿರಿಯ ಸಹೋದರಿ ಹಾಗೂ ದಿ. ಬೆಳ್ಳೆ ಸುಂದರ್ ಶೆಟ್ಟಿ ಅವರ ಧರ್ಮಪತ್ನಿಯಾಗಿದ್ದು ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗ ಮತ್ತು ವಿದ್ಯಾರ್ಥಿವೃಂದವನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಸೆಪ್ಟೆಂಬರ್ 9ರಂದು ಸುಭೋದಿನಿ ಶಾಲೆಗೆ ರಜೆ ಘೋಷಿಸಲಾಯಿತು.



















