“ಗಳಿಸುವುದನ್ನು ಉಳಿಸುವುದಕ್ಕಿಂತ ಪರಸೇವೆಯಲ್ಲೇ ಸಾರ್ಥಕತೆ”-ಆಲ್ಬನ್ ಡಿಸೋಜ,ಧರ್ಮ ಗುರುಗಳು ಅತ್ತೂರು ಚರ್ಚ್

ಸ್ವಾತ್ರಂತ್ಯ ದಿನಾಚರಣೆಯ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರವಾರ ಕಾರ್ಕಳ ಶಾಖೆ ಇವರ ವತಿಯಿಂದ ಚೇತನ ವಿಶೇಷ ಶಾಲೆ ಆನೆಕೆರೆ ಕಾರ್ಕಳ ಇಲ್ಲಿನ ವಿಕಲಚೇತನ ಮಕ್ಕಳಿಗೆ ಆಗತ್ಯ ವಸ್ತುಗಳ ವಿತರಣೆಯ ಕಾರ್ಯಕರ್ಮವನ್ನು ಪ್ರತಿವರ್ಷ ದಂತೆ ಈ ವರ್ಷವು ಹಮ್ಮಿಕೊಂಡಿದ್ದರು . ಪ್ರತಿವರ್ಷದಂತೆ ಸಂಸ್ಥೆಯ ವತಿಯಿಂದ ಸ್ವಾತ್ರಂತ್ಯ ದಿನಾಚರಣೆಯ ಅಂಗವಾಗಿ ಚೇತನ ವಿಶೇಷ ಶಾಲಾ ಮಕ್ಕಳಿಗೆ ಬೆಡ್ ಶಿಟ್ , ಟವಲ್ ಹಾಗೂ ಬಿಸ್ಕತ್ ಜ್ಯೂಸ್ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಜನರ ಸೇವೆಯೇ ಜರ್ನಾಧನ ಸೇವೆ,ಅಂಗವಿಕಲತೆ ಶಾಪವಲ್ಲ ದೇವರ ವರ ,ಸುಮಾರು ವರ್ಷಗಳಿಂದ ಬ್ಯಾಂಕ್ ತನ್ನ ಉತ್ತಮ ಸೇವೆಯೊಂದಿಗೆ ಇಂತಹ ಸಮಾಜಮುಖಿಕಾರ್ಯದಲ್ಲಿ
ಕೈಜೋಡಿಸಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ ,ದೇವರು ಮುಂದೆಯೂ ಇಂತಹ ಕಾರ್ಯಕ್ಕೆ ಮನಸ್ಸು ಮಾಡುವಲ್ಲಿ ಅನುಗ್ರಹಿಸಲಿ ಎಂದು ಧರ್ಮ ಗುರುಗಳಾದ ಫಾದರ್ ಅಲ್ಬಾನ್ ಡಿ ಸೋಜ ಸೈಂಟ್ ಲಾರೆನ್ಸ್ ಬಸಲಿಕ ಅತ್ತೂರ್ ಚರ್ಚ್ ಅವರು ಸ್ವತಂತ್ರ ದಿನಕ್ಕೆ ಶುಭ ಹಾರೈಕೆಗಳನ್ನು ಹಾರೈಸಿದರು.ಚೇತನ ವಿಶೇಷ ಶಾಲೆ ಕೋಶಾಧಿಕಾರಿ ವಿಜಯ ಕುಮಾರ್ ಇವರು ಪ್ರತಿವರ್ಷದಂತೆ ಸಂಸ್ಥೆಯ ಸಮಾಜಮುಖಿ ಕೆಲಸವನ್ನು ಶ್ಲಾಘೀಸುತ್ತಾ, ಸೈಂಟ್ ಮೀಲಾಗ್ರೀಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಮತ್ತು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ಆದ ಜಾರ್ಜ್ ಫ್ರೆರ್ನಾಂಡೀಸ್ ರವರಿಗೆ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ಹಾರೈಸಿದರು. ಸಂಸ್ಥೆಯ ವತಿಯಿಂದ ಸ್ವಾತ್ರಂತ್ಯ ದಿನಾಚರಣೆಯ ಅಂಗವಾಗಿ ಚೇತನ ವಿಶೇಷ ಶಾಲ ಮಕ್ಕಳಿಗೆ ಬೆಡ್ ಶಿಟ್ , ಟವಲ್ ಹಾಗೂ ಬಿಸ್ಕತ್ ಜ್ಯೂಸ್ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರರ್ಮಕ್ಕೆ ಮುಖ್ಯ ಅತಿಥಿಯಾಗಿ ಧರ್ಮ ಗುರುಗಳಾದ ಪಾಧರ್ ಅಲ್ಬಾನ್ ಡಿ ಸೋಜ ಸೈಂಟ್ ಲಾರೆನ್ಸ್ ಬೆಸಿಲಿಕಾ ಅತ್ತೂರು ಚರ್ಚ್ ಮತ್ತು ಕೃಷ್ಣ ಬ್ಯಾಗ್ಸ್ ಮಾಲೀಕರಾದ ರಾಜೇಶ್ ಪೂಜಾರಿ ಹಾಗೂ ಶಾಖಾ ವ್ಯವಸ್ಥಾಪಕರಾದ ಶ್ರೀ ಕಿಶೋರ್ ದೇವಾಡಿಗ ಮತ್ತು ಉಡುಪಿ ಮತ್ತು ಮಂಗಳೂರು ವಿಭಾಗ ಅಭಿವೃದ್ಧಿ ವ್ಯವಸ್ಥಾಪಕರಾದ ಮನೀಶ್ ಹಾಗೂ ಉಡುಪಿ ಮತ್ತು ಮಂಗಳೂರು ವಿಭಾಗ ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ , ಸಿಬ್ಬಂದಿ ವರ್ಗದವರು ಮತ್ತು ಚೇತನ ವಿಶೇಷ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



















