
ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣೆಯ ನೂತನ ಎಸ್ಐ ಆಗಿ ಮುರಳೀಧರ್ ನಾಯ್ಕ್ ಅವರು ಅಧಿಕಾರ ವಹಿಸಲಿದ್ದು, ಎಸ್ಐ ಸಂದೀಪ್ ಶೆಟ್ಟಿ ಅವರು ವರ್ಗಾವಣೆಗೊಂಡಿದ್ದಾರೆ.
2018ರಲ್ಲಿ ಇಲಾಖೆಗೆ ಸೇರ್ಪಡೆಗೊಂಡಿದ್ದ ಸಂದೀಪ್ ಶೆಟ್ಟಿ ಅವರು ಮೂಲತಃ ಕುಂದಾಪುರದ ಗುಲ್ವಾಡಿಯವರಾಗಿದ್ದು 2021ರ ಆಗಸ್ಟ್ ನಿಂದ ವಿಟ್ಲ ಠಾಣೆ ಕಾನೂನು ಮತ್ತು ಸುವ್ಯವಸ್ಥೆಯ ಉಪನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2023ರ ಜೂನ್ ನಿಂದ ಕಾರ್ಕಳ ನಗರ ಪೊಲೀಸ್ ಠಾಣೆಯ ಎಸ್ ಐ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ವರ್ಗಾವಣೆಯಾಗಿದ್ದಾರೆ.



















