21.3 C
Udupi
Wednesday, February 4, 2026
spot_img
spot_img
HomeBlogಕಾರ್ಕಳ: ಸ್ಟೇಷನರಿ ಪರಿಕರಗಳನ್ನು ಕೊಡುವುದಾಗಿ ಮಹಿಳೆಗೆ 9.50 ಲಕ್ಷ ರೂ. ವಂಚನೆ,ಆರೋಪಿಯ ಬಂಧನ

ಕಾರ್ಕಳ: ಸ್ಟೇಷನರಿ ಪರಿಕರಗಳನ್ನು ಕೊಡುವುದಾಗಿ ಮಹಿಳೆಗೆ 9.50 ಲಕ್ಷ ರೂ. ವಂಚನೆ,ಆರೋಪಿಯ ಬಂಧನ

ಕಾರ್ಕಳ: ಎಪ್ರಿಲ್ 22 :ರಂಗನಪಲ್ಕೆ, ಕೌಡೂರು ಗ್ರಾಮದ ನಿವಾಸಿ ಕವಿತಾ ಕೃಪಾಲಿನಿ ಎಂಬ ಮಹಿಳೆಯು ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ಸ್ಟೇಷನರಿ ಮತ್ತು ಬುಕ್ ವ್ಯಾಪಾರದ ಅಂಗಡಿಯನ್ನು ನಡೆಸಿಕೊಂಡಿದ್ದು, ದೂಪದಕಟ್ಟೆ ನಿವಾಸಿ ರಾಘವೇಂದ್ರ. ಎಸ್. ಎಂಬುವವನು ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕಾರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಸಾಲಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಅವನದೇ ಆದ Lakshmi ಎಂಟರ್ಪ್ರೈಸಸ್ ಮಳಿಗೆಯ ಕೊಟೇಶನ್ ನೀಡಿದ್ದು,ದಾಖಲಾತಿ ಹಾಗೂ ಕೊಟೇಶನನ್ನು ಖಾತೆ ಹೊಂದಿರುವ ಹಾಗೂ ಸಾಲಕ್ಕೆ ಅರ್ಜಿ ಹಾಕಿದ್ದ ಕೆನರಾ ಬ್ಯಾಂಕ್ ಕಣಜಾರು ಶಾಖೆಗೆ ನೀಡಿದ್ದು, 9.50 ಲಕ್ಷ ಲೋನ್ ಸ್ಯಾಂಕ್ಷನ್ ಆಗಿತ್ತು ,ನಂತರ ಆ ಖಾತೆಯಿಂದ ದಿನಾಂಕ 18.12.2024 ರಂದು ಕೊಟೇಶನ್ ನೀಡಿದ Lakshmi ಎಂಟರ್ಪ್ರೈಸಸ್ ನ ಖಾತೆ ಐಸಿಐಸಿಐ ಬ್ಯಾಂಕ್ ಕಾರ್ಕಳ ಕ್ಕೆ ಸುಮಾರು 9.50 ಲಕ್ಷ ಹಣ ವರ್ಗಾವಣೆ ಆಗಿರುತ್ತದೆ.

Lakshmi ಎಂಟರ್ಪ್ರೈಸಸ್ ಗೆ ಹಣ ಜಮೆಯಾದ ಬಗ್ಗೆ ರಾಘವೇಂದ್ರ.
ಎಸ್. ಎಂಬವನಿಗೆ ತಿಳಿಸಿದ್ದು, ಆಗ ರಾಘವೇಂದ್ರನು 25 ದಿನಗಳಲ್ಲಿ ಕೊಟೇಶನ್ ನಲ್ಲಿರುವ ಎಲ್ಲಾ ಸಾಮಗ್ರಿಗಳನ್ನ ನೀಡುತ್ತೇನೆ ಎಂದು ಭರವಸೆ ನೀಡಿ ಮಹಿಳೆಗೆ ಮೋಸ ಮಾಡಿದ್ದಾನೆ .

“ನನಗೆ ರಾಘವೇಂದ್ರ ಎಂಬವನು ನಂಬಿಸಿ ಮೋಸ, ವಂಚನೆ ಹಾಗೂ ನಂಬಿಕೆ ದ್ರೋಹ ಮಾಡಿದ್ದಾನೆ” ಎಂಬುದಾಗಿ ಮಹಿಳೆಯು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.ಅದರಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 61/2025 ಕಲಂ 316(2),318(4) ಬಿಎನ್ಎಸ್ ರಂತೆ ದಿನಾಂಕ 22/04/ 2025 ರಂದು ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎ.ಎಸ್.ಪಿ ಡಾ.ಹರ್ಷ ಪ್ರಿಯಂವದ, ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಡಿ.ಆರ್, ಪೊಲೀಸ್ ಉಪ ನಿರೀಕ್ಷಕರುಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್ ಹಾಗೂ ಸಿಬ್ಬಂದಿಗಳ ತಂಡ ತಾಂತ್ರಿಕ ಸಹಾಯದಿಂದ ಹಾಗೂ ಬಾತ್ಮಿ ದಾರರ ಸಹಾಯದಿಂದ ದಿನಾಂಕ 06/06/ 2025 ರಂದು ಬೆಂಗಳೂರಿನ ಗಾಂಧಿನಗರದಲ್ಲಿ ಆರೋಪಿ ರಾಘವೇಂದ್ರ ಎಸ್ ನನ್ನ ವಶಕ್ಕೆ ಪಡೆದು ಠಾಣೆಗೆ ಕರೆತಂದು ದಿನಾಂಕ 07/06/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ, ಅದರಂತೆ ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು ಆರೋಪಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿ ಬಂದಿತನಾಗಿದ್ದಾನೆ. ಈತನು ಈ ಹಿಂದೆ ಹಲವು ಜನಗಳಿಗೆ ಇದೇ ರೀತಿ ಮೋಸ ಮಾಡಿರುವುದು ತಿಳಿದು ಬಂದಿರುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page