26.3 C
Udupi
Saturday, February 21, 2026
spot_img
spot_img
HomeBlog5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಸೇರಿಸಬಹುದು: ಸಚಿವ ಮಧು ಬಂಗಾರಪ್ಪ

5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಸೇರಿಸಬಹುದು: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯ ಸರ್ಕಾರವು 1ನೇ ತರಗತಿಗೆ ಸೇರಲು ವಯಸ್ಸಿನ ಮಿತಿ ಸಡಿಲಿಸಿದ್ದು ಅದೇನೆಂದರೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳು ಒಂದನೇ ತರಗತಿಗೆ ಸೇರಬಹುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪೋಷಕರು ವಯೋಮಿತಿ ಗೊಂದಲದಲ್ಲಿ ಇದ್ದಾರೆ. ಎರಡು ತಿಂಗಳು ರಿಯಾಯ್ತಿ ಕೊಡಬಹುದು. ದೇಶದಲ್ಲಿ ಈಗಾಗಲೇ 6 ವರ್ಷ ಇದೆ. ಈ ವರ್ಷ ಮಾತ್ರ ವಯಸ್ಸಿನ ಮಿತಿ ಸಡಿಲ ಮಾಡಲಾಗುವುದು. ಮುಂದಿನ ವರ್ಷದಿಂದ 1ನೇ ತರಗತಿಗೆ ಸೇರಲು 6 ವರ್ಷ ನಿಯಮ ಕಡ್ಡಾಯ ಎಂದು ತಿಳಿಸಿದರು.

1ನೇ ತರಗತಿಗೆ 5 ವರ್ಷ 5 ತಿಂಗಳು ದಾಖಲಾತಿ ಮಿತಿ ಸಡಿಲಿಕೆ ಮಾಡಲಾಗಿದ್ದು ಇದು ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯವಾಗಲಿದೆ. ಐಸಿಎಸ್‌ಸಿ, ಸಿಬಿಎಸ್‌ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗೊಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page