
ಕಾರ್ಕಳ: ಪಳ್ಳಿ ಶ್ರೀ ಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವಾರ್ಷಿಕ ಮಹೋತ್ಸವದ ಸಂದರ್ಭ ವರ್ಷಂಪ್ರತಿಯAತೆ ಪರಿಸರದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕ್ಷೇತ್ರದ ವತಿಯಿಂದ ಮಂಗಳವಾರ ವಸ್ತ್ರದಾನ ನಡೆಯಿತು.
24ನೇ ವರ್ಷದ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಅವರು 16 ಶಾಲೆಗಳ 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಸ್ತçದಾನ ಮಾಡಿದರು. ಕ್ಷೇತ್ರದ ವೈದಿಕರಾದ ವಿಷ್ಣುಪ್ರಸಾದ್ ಭಟ್, ಹರಿಪ್ರಸಾದ್ ಭಟ್, ಶಿವಪ್ರಸಾದ್ ಭಟ್, ಕ್ಷೇತ್ರದ ಭಗವದ್ಭಕ್ತರಾದ ಉಮೇಶ ನಾಯಕ್ ಪೆರ್ಣಂಕಿಲ, ಸುಬ್ರಹ್ಮಣ್ಯ ಪ್ರಭು ಪುನಾರು, ಶಾಲೆಗಳ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು.






















































































