
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಮ್ಮ ಶಾಲಾ ಸಮಿತಿಯ ಸದಸ್ಯರು ಹಾಗೂ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ, ಕಾರ್ಕಳ ತಾಲೂಕಿನ ಅಧ್ಯಕ್ಷರಾದ ಶ್ರೀ ವೃಷಭರಾಜ್ ಕಡಂಬ ಅವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತಾ, ಯುವಕ- ಯುವತಿಯರು ಮಕ್ಕಳು ಅಡ್ಡದಾರಿ ಹಿಡಿಯದೆ ಒಳ್ಳೆಯ ದಾರಿ ಹಿಡಿಯಬೇಕು. ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶಿಬಿರಾಧಿಕಾರಿಗಳಾದ ಶ್ರೀದೇವಿ ಪ್ರಸಾದ್ ರವರು ಸ್ವಾಸ್ಥ್ಯ ಸಂಕಲ್ಪದ ಬಗ್ಗೆ ಮಾಹಿತಿ ನೀಡುತ್ತಾ, ದಾರಿ ತಪ್ಪಿಸುವ ವ್ಯವಸ್ಥೆ ಸಮಾಜದಲ್ಲಿದೆ. ಇಂದು ಯುವಕರು ರೋಗ ಅಪಘಾತಗಳಿಗಿಂತ ಕುಡಿತದಿಂದ ಸಾಯುತ್ತಿದ್ದಾರೆ. ಸಿಗರೇಟಿನಲ್ಲಿ ಮೂರರಿಂದ ಮೂರುವರೆ ಸಾವಿರ ವಿಷವಿದೆ. ಸಿಗರೇಟ್ ಸುಖ ಕೊಡುವ ವಸ್ತು ಅಲ್ಲ. ಮಧ್ಯಪಾನಕ್ಕೆ ಬಲಿಯಾಗಲು ಪೂರಕವಾದ ಅಂಶ ಕೆಲವು ಕಾರ್ಯಕ್ರಮಗಳು. ಕರ್ನಾಟಕದಲ್ಲಿ ತಿಂಗಳಿಗೆ 25,000 ಮಧ್ಯವರ್ಜನ ಶಿಬಿರಗಳಾಗುತ್ತವೆ. ಯಾವುದೇ ಧರ್ಮದಲ್ಲಿ ಕುಡಿಯಲು ಹೇಳಲಿಲ್ಲ. ಕಾಲೇಜಿನಲ್ಲಿ ಹೊಸ ಪರಿಚಯವಾದಾಗ ಜಾಗರೂಕರಾಗಿರಬೇಕು. ಚಾಕಲೇಟಿಗೆ ಡ್ರಗ್ಸ್ ಇಂಜೆಕ್ಟ್ ಮಾಡಿರುತ್ತಾರೆ. ಅಮಲು ಬೇಕೆನಿಸಿದಾಗ,ಡ್ರಗ್ಸ್ ಬೇಕೆನಿಸಿದಾಗ ಪೆಟ್ರೋಲ್ ಡೀಸೆಲ್ ಗಳನ್ನು ಕುಡಿಯುತ್ತಾರೆ. ಫಾಸ್ಟ್ ಫುಡ್ ಗಳನ್ನು ತಿನ್ನಬೇಡಿ ಅದರಲ್ಲಿರುವ ವಿನೆಗರ್ ಕರುಳಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ಪಿ ರವರು, ಜನಜಾಗ್ರತಿ ವೇದಿಕೆ ಕಾರ್ಕಳದ ಸದಸ್ಯರಾದ ಶ್ರೀ ಅಶೋಕ್ ಶೆಟ್ಟಿ ಯವರು, ಕಾರ್ಕಳ ನಗರ ವಲಯ ಮೇಲ್ವಿವಿಚಾರಕರಾದ ಶ್ರೀಮತಿ ಗೀತಾ ಹೆಗ್ಡೆ, ಜನ ಜಾಗೃತಿ ವೇದಿಕೆ ಕಾರ್ಕಳ ಸದಸ್ಯರು ಯೋಗೀಶ್ ಸಾಲಿಯಾನ್, ಜೇಸಿಐ ಕಾರ್ಕಳದ ಜೇಸಿ ಪ್ರಸಾದ್ ಐಸಿರ, ಪೆರ್ವಾಜೆ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಶೈಲಜಾ ರವರು ಹಾಗೂ ಶಾಲಾ ಆಡಳಿತ ಅಧಿಕಾರಿ ಪ್ರಣೀತ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಶಿಲ್ಪಾ ಶೆಟ್ಟಿ ಯವರು ನಿರ್ವಹಿಸಿದರು, ಕುಮಾರಿ ಇಷ್ಟ ನಿರೂಪಿಸಿದರು, ಕುಮಾರಿ ಶ್ರಾವಣಿ ವಂದಿಸಿದರು.






















































































