27.7 C
Udupi
Sunday, April 26, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 19)

ಚೇತನ್ ವರ್ಕಾಡಿ

ಕಾರ್ ಸ್ಟಾಟ್ ಮಾಡಿ ಹೊರಟೇಬಿಟ್ಟ.ಮಧುವಿನ ವರ್ತನೆಯ ಹಿಂದಿರುವ ನೋವು ಮಿಥುನ್‌ನಿಗೆ ಹೇಗೆ ಅರ್ಥ‌ವಾಗಬೇಕು.ಏನಾಯ್ತು ಮಧು ಅಪ್‌ಸೆಟ್ ಆಗಿದ್ದ‌ಯ ಎಂದು ಕೇಳಿದರೆ ಸುಮ್ಮನೆ ಆಫೀಸಿನ ಕೆಲಸವನ್ನೇ ಮಧ್ಯೆ ತುಂದು ನಿಜ ಸಂಗತಿಗೆ ತಾತ್ಕಾಲಿಕ ಪರದೆ ಎಳೆಯುತ್ತಿದ್ದ.ಕಾರು ಮುಂದೆ ಮುಂದೆ ಹೋಗುತ್ತಿತ್ತು, ಮಿಥುನ್‌ನಿಗೆ ಮಂಗಳಳ ಮುಖವೆ ಕಾಣುತ್ತಿತ್ತು.ಲೋ ಮಧು ನನ್ ಹುಡುಗಿ ಹೇಗಿದ್ದಾಳೊ ಎಂದು ಕೇಳುವಾಗಲೂ ಏನೂ ಕೇಳದಂತೆ ಅವನಷ್ಟಕೆ ಕಾರು ಚಲಾಯಿಸುತ್ತಿದ್ದ.ಮನಸಿನಲ್ಲಿ ಇದ್ದ ಗೊಂದಲದ ನಡುವೆ ಕಾರಿನ ವೇಗ ನೂರನ್ನು ದಾಟಿತ್ತು.ಮಿಥುನ್ ಮತ್ತೆ ಅದೇ ಪ್ರಶ್ನೆ‌ಯನ್ನು ಪುನರಾವರ್ತಿಸಿದಾಗ ಯೋಚನೆಯ ಕಡಲಲ್ಲಿ ಮುಳುಗಿದ್ದ ಮಧು ಪಕ್ಕನೆ ಮೇಲೆದ್ದಾಗ ಕಾರಿನ ವೇಗ ಕೂಡ ಹತೋಟಿಗೆ ಬಂತು.ಆಪ್ತ‌ಮಿತ್ರನ ಪ್ರಶ್ನೆಗೆ ಸೂಪರ್ ಎಂದಷ್ಟೇ ಹೇಳಿ ಮುಗಿಸಿಬಿಟ್ಟ.ಮಧು ಮತ್ತು ಮಿಥುನ್‌ನ ತಾಯಿ ತಂದೆ ಬೇರೆ ಬೇರೆಯಾಗಿದ್ದರು ಅವರ ಸ್ನೇಹ ಸಂಬಂಧ ಎಲ್ಲವನ್ನೂ ಮೀರುವಂತಿತ್ತು.ತಾನು ಹೆಣ್ಣು ನೋಡೋಕೆ ಹೋಗೊ ವಿಷಯ ತನ್ನ ಆಪ್ತ‌ಮಿತ್ರನಿಗೆ ಬಿಟ್ಟು ಬೇರೆ ಯಾರಿಗೂ ಹೇಳದ ಮಿಥುನ್..!ನೇರ ಗೆಳೆಯನ ಜೊತೆ ಮಧುವಿನ ಮನೆ ಬಂದು ಸೇರಿದ.ತನ್ನ ಮಗನಂತೆ ಮಧುವಿನ ತಂದೆತಾಯಿ ಮಿಥುನ್‌ನನ್ನು ಕೂಡ ಪ್ರೀತಿಸುತ್ತಿದ್ದರು.ಮತ್ತೊಬ್ಬ ಮಗ ಸಡನ್ನಾಗಿ ಎಂಟ್ರಿ ಕೊಟ್ಟ ಖುಷಿ‌ಯಲ್ಲಿ ಸುಗಂಧಿ ಮತ್ತು ಸೋಮಶೇಖರರಾಯರು ಮಿಥುನ್‌ನನ್ನು ಸ್ವಾಗತಿಸಲು ಬರುತ್ತಿದ್ದರೆ,ಮಧು ಯಾಕೊ ಮೂಡೆ ಇಲ್ಲದವನಂತೆ ತನ್ನ ರೂಮಿನೊಳಗೆ ಹೋದವನೆ ಬಾಗಿಲುಮುಚ್ಚಿ ಕುಳಿತ..
ಮಿಥುನ್‌ನಿಗೆ ಮಧುವಿನ ಮನಸಿನಲ್ಲಿರುವ ಸತ್ಯವನ್ನು ಹುಡುಕಿ ತೆಗೆಯುವ ಛಲ ಉಂಟಾಯಿತು,ಆಫೀಸಿನ ಕೆಲಸದ ಬಗ್ಗೆ ಯಾವತ್ತೂ ಇಷ್ಟು ಟೆನ್ಶನ್ ತಗೊಂಡವನಲ್ಲ ಮಧು..!ಏನೊ ವಿಷಯ ಅಡಗಿದೆ ಎಂದು ಮನದಲ್ಲೆ ಆಲೋಚಿಸಿ‌ದವ ಪ್ರೀತಿಯ ಆಂಟಿ ಮತ್ತು ಅಂಕಲ್ ಜೊತೆ ಒಂದಷ್ಟು ಹೊತ್ತು ಕಳೆದು ತಿಂಡಿತಿನ್ನುತ್ತಾ ಸಮಯಕಳೆದ..
ಆಂಟಿ ಮಧುವಿಗೆ ಹೆಣ್ಣು ಹುಡುಕಲ್ವ ಎಂದು ಹೇಳಿ ಮಿಥುನ್ ಮಾತು ಮುಗಿಸುವಷ್ಟರಲ್ಲಿ ಹೊರಗಿನಿಂದ ಯಾರೋ ಕಾಲಿಂಗ್ ಬೆಲ್ ಒತ್ತಿಯೇ ಬಿಟ್ಟರು….?

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page