ಕಿರುತೆರೆ ನಟಿ ತನ್ವಿ ರಾವ್ (ಕೀರ್ತಿ)ರವರಿಗೆ ಗೌರವ ಪ್ರಶಸ್ತಿ ಪ್ರಧಾನ

ಮಂಗಳೂರು: -ಮಠದಕಣಿ ಯ ಶ್ರೀ ವೀರಭದ್ರ – ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 47ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಭಾನುವಾರ (6-10-2024) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು . ಎಲ್ಲರ ಮೆಚ್ಚುಗೆ ಪಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ತನ್ವಿ ರಾವ್ ರವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ “ಕರುನಾಡ ಕಲಾ ಸಿರಿ” ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ವೇತಾ ಜೈನ್ ವಕೀಲರು ಮೂಡುಬಿದಿರೆ, ಅಶೋಕ್ ಎ. ಮಂಗಳೂರು, ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ಲೋಕಯ್ಯ ಶೆಟ್ಟಿಗಾರ, ವಿಶ್ವನಾಥ್ ಶೆಟ್ಟಿಗಾರ , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು,
ಶ್ರಾವ್ಯ ಕಿಶೋರ್ , ಪಾರ್ಥನಾ ರೋಹಿತ್, ರಿಮಾ ಜಗನ್ನಾಥ್ , ವಂಸತ್ ನಾಯ್ಕ್, ಆಶಿಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.
ಶ್ರೇಯಾ ದಾಸ್ ಹಾಗೂ ಅರ್ಚಿತ್ ಜೈನ್ ನಿರೂಪಿಸಿದರು.
ಗೌರವ್ ಶೆಟ್ಟಿಗಾರ,
ಕೃತಿ ಸನಿಲ್, ಪೆರಣಾ ಜೆ, ಶ್ರೇಯಾ ಭಟ್ , ಅಪೇಕ್ಷಾ ಎ , ಸಾನಿಧ್ಯ ಜೈನ್ , ನಯನಾ ಮೊದಲಾದವರು ಸಹಕರಿಸಿದರು.













