31 C
Udupi
Thursday, April 23, 2026
spot_img
spot_img
HomeBlog14 ತಿಂಗಳ ಹಿಂದೆ ಕಾಣೆಯಾದ 2 ವರ್ಷದ ಕೂಸು, ಪ್ರಕರಣ ಭೇದಿಸಿದ ಪೊಲೀಸರು

14 ತಿಂಗಳ ಹಿಂದೆ ಕಾಣೆಯಾದ 2 ವರ್ಷದ ಕೂಸು, ಪ್ರಕರಣ ಭೇದಿಸಿದ ಪೊಲೀಸರು

ಕಿಡ್ನ್ಯಾಪರ್ ನ ಬಿಟ್ಟು ಪೋಷಕರ ಜೊತೆ ಹೋಗಲೊಪ್ಪದ ಮಗು, ಅಪರೂಪದ ಘಟನೆ

ಜೈಪುರ : ನಗರದಲ್ಲೊಂದು ಅಪರೂಪದ ಘಟನೆ ವರದಿಯಾಗಿದೆ 14 ತಿಂಗಳ ಹಿಂದೆ ಎರಡು ವರ್ಷದ ಮಗು ಒಂದು ಕಾಣೆಯಾಗಿದ್ದು, ಇದೀಗ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಗುವನ್ನು ಹದಿನಾಲ್ಕು ತಿಂಗಳ ಹಿಂದೆ ಕಿಡ್ನ್ಯಾಪ್ ಮಾಡಿದ ವ್ಯಕ್ತಿ ಮಗುವಿನ ಜೊತೆ ಪತ್ತೆಯಾಗಿದ್ದು, 14 ತಿಂಗಳಿಂದ ವ್ಯಕ್ತಿಯ ಜೊತೆಗಿದ್ದ ಮಗು ಇದೀಗ ಪೋಷಕರ ಬಳಿ ಹೋಗದೆ ಆತನನ್ನೇ ಬಿಗಿಯಾಗಿ ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತ ಘಟನೆ ವರದಿಯಾಗಿದೆ.

ರಾಜಸ್ಥಾನದ ಜೈಪುರ ಪೊಲೀಸರು ಎರಡು ವರ್ಷದ ಪ್ರಥ್ವಿ ಎಂಬ ಮಗುವಿನ ಅಪಹರಣ ಪ್ರಕರಣದ ಕಾರ್ಯಾಚರಣೆ ನಡೆಸಿದ್ದು ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಉತ್ತರ ಪ್ರದೇಶದ ಊರಾಚೆಗಿನ ಪುಟ್ಟ ಮನೆಯಲ್ಲಿ ವಾಸವಾಗಿದ್ದನು ಪೊಲೀಸರ ನಿರಂತರ ಕಾರ್ಯಾಚರಣೆಯಿಂದಾಗಿ ವ್ಯಕ್ತಿಯ ಬಂಧನ ವಾಗಿದ್ದು, ಮಗು ಮಾತ್ರ ಪೋಷಕರ ಬಳಿ ತೆರಳಲು ಒಪ್ಪದೇ ಕಿಡ್ನಾಪ್ ಮಾಡಿದ ವ್ಯಕ್ತಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಳಲು ಆರಂಭಿಸಿದೆ. ಪೊಲೀಸರು ಬಲವಂತವಾಗಿ ಆರೋಪಿಯಿಂದ ಮಗುವನ್ನು ಬಿಡಿಸಿಕೊಂಡು ಪೋಷಕರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಆ ಸಮಯದಲ್ಲೂ ಮಗು ಅಮ್ಮನನ್ನೇ ಪರಿಗಣಿಸದೆ ವ್ಯಕ್ತಿಯನ್ನೇ ಕೈ ತೋರಿಸಿ ಚೀರಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page