
ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಕಾರ್ಕಳದಲ್ಲಿ ನವೆಂಬರ್ 21 ಮತ್ತು 22ರಂದು ಅಖಂಡ ಪಂಚನಮಸ್ಕಾರ ಮಹಾಮಂತ್ರ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸನ್ಮಿತ್ರ ಜೈನ್ ಅಸೋಸಿಯೇಷನ್ (ರಿ.) ವತಿಯಿಂದ ಕಾರ್ಕಳದ ಆನೆಕೆರೆ ಚತುರ್ಮುಖ ಬಸದಿ, ಕೆರೆ ಬಸದಿ ಸಂಪೂರ್ಣವಾಗಿ ಶಿಲಾಮಯಗೊಂಡ ನಂತರ ಪರಮಪೂಜ್ಯ ಏಲಾಚಾರ್ಯ 108 ಶ್ರೀ ಪ್ರಸಂಗಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಕಾರ್ಕಳದ ಆನೆಕೆರೆ ಚತುರ್ಮುಖ ಕೆರೆ ಬಸದಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನ. 21ರ ಶನಿವಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗಿ, ನ. 22ರ ಭಾನುವಾರ ಸಂಜೆ 6 ಗಂಟೆಗೆ ಸಮಾಪನಗೊಳ್ಳಲಿದೆ.
ಶೀತಲ್ ಜೈನ್ ಶಿರ್ಲಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ಭರತ್ ಕುಮಾರ್ ಜೈನ್ ಇರ್ವತ್ತೂರು ಕಾರ್ಯದರ್ಶಿಯಾಗಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಕಳಸ-ಸೀಮೆಯ ಸಮಸ್ತ ಶ್ರಾವಕ ಶ್ರಾವಕಿಯರ ಸಹಯೋಗದೊಂದಿಗೆ 24 ಗಂಟೆಗಳ ಕಾಲ ಈ ಅಖಂಡ ಪಂಚ ನಮಸ್ಕಾರ ಮಹಾಮಂತ್ರ ಪಠಣ ಕಾರ್ಯಕ್ರಮ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸನ್ಮಿತ್ರ ಜೈನ್ ಅಸೋಸಿಯೇಷನ್ (ರಿ.), ಮನವಿ ಮಾಡಿದೆ.
























































































