
ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ ಗ್ರಾಮ ಸಮಿತಿ ಕಬ್ಬಿನಾಲೆ ಇದರ ನೂತನ ಸಮಿತಿಗೆ ಕಡತ ಹಸ್ತಾಂತರ ಸಭೆಯು ಆಗಸ್ಟ್ 30ರಂದು ಗ್ರಾಮ ಸಮಿತಿ ಅಧ್ಯಕ್ಷ ದಯಾಕರ ಗೌಡ ಬಂಗ್ಲೆಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ಕಬ್ಬಿನಾಲೆ ಮಲೆಕುಡಿಯ ಸಮುದಾಯ ಭವನದಲ್ಲಿ ಜರಗಿತು.
ನೂತನ ಸಮಿತಿಯನ್ನು ದಿನಾಂಕ 16.03.2024ರಂದು ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ನೂತನ ಅಧ್ಯಕ್ಷರಾಗಿ ರಾಜು ಗೌಡ ಕುಚ್ಚೂರು, ಉಪಾಧ್ಯಕ್ಷರಾಗಿ ಪ್ರಶಾಂತ್ ಪೀತುಬೈಲು, ಸುಂದರಿ ಹೊಸಮನೆ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಕೊರ್ತಬೈಲು, ಜತೆ ಕಾರ್ಯದರ್ಶಿಯಾಗಿ ಸತೀಶ್ ಮತ್ತಾವು, ಕೋಶಾಧಿಕಾರಿಯಾಗಿ ವಸಂತ ಕೊಳರಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಪುಂಡಾಲು, ರತ್ನ ಬಂಗ್ಲೆಗುಡ್ಡೆ, ಗೌರವ ಸಲಹೆಗಾರರಾಗಿ ನಾರಾಯಣ ಅಲಂಗಾಡು, ದಯಾಕರ ಗೌಡ ಬಂಗ್ಲೆಗುಡ್ಡೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಠಲ ಗೌಡ ಮುಡ್ಲಾಂತ್, ಹರೀಶ್ ಸಂಪಿಗೆ ದರ್ಖಾಸು ಆಯ್ಕೆಯಾಗಿದ್ದರು.
ಈ ಸಭೆಯಲ್ಲಿ ನೂತನ ಸಮಿತಿಗೆ ಸಮಾಜ ಬಾಂಧವರ ಸಮ್ಮುಖದಲ್ಲಿ ಸಂಘದ ಎಲ್ಲಾ ಕಡತಗಳನ್ನು ಹಸ್ತಾಂತರ ಮಾಡಲಾಯಿತು.
ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಗಂಗಾಧರ ಗೌಡ ಇವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಸಮುದಾಯದ ಆಶೋತ್ತರಗಳು ಹಾಗೂ ಅಭ್ಯುಧಯಕ್ಕಾಗಿ ಹಕ್ಕೋತ್ತಾಯ ಮಂಡಿಸಿದ ಬಗ್ಗೆ ವಿವರಿಸಿದರು. ಗ್ರಾಮ ಸಮಿತಿಯ ಕಾರ್ಯಚಟುವಟಿಕೆಗಳು, ಗ್ರಾಮದ ಒಗ್ಗಟ್ಟಿನ ಕುರಿತಂತೆ ಶ್ಲಾಘಿಸಿ, ಶಿಕ್ಷಣಕ್ಕೆ ಒತ್ತು ನೀಡುವಂತೆ ಕರೆ ನೀಡಿದರು.
ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಪುಂಡಾಲು, ವಕ್ತಾರೆ ಸುಜಾತ, ಮಾಜಿ ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಮೇಲ್ಮಟ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿ ಪುಂಡಾಲು, ನೂತನ ಅಧ್ಯಕ್ಷರಾದ ರಾಜು ಗೌಡ, ನೂತನ ಪ್ರಧಾನ ಕಾರ್ಯದರ್ಶಿ ಶಶಿಧರ್ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಪ್ಟಂಬರ್ 18 ಅಥವಾ 25ರಂದು ಆಧಾರ್ ಕ್ಯಾಂಪ್ ಅನ್ನು ಕಬ್ಬಿನಾಲೆ ಸಮುದಾಯ ಭವನದಲ್ಲಿ ಆಯೋಜಿಸುವುದಾಗಿ ತೀರ್ಮಾನಿಸಲಾಯಿತು.
ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಇವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.













