ಮಿಸ್ ಯೂನಿವರ್ಸ್ ಕರ್ನಾಟಕ- 2026 ತನ್ನದಾಗಿಸಿಕೊಂಡಿದ್ದು, ಸಿಎಂ ಡಿಸಿಎಂ ರಿಂದ ಗೌರವ ಸನ್ಮಾನ

17 ಬಾರಿ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಅನೇಕ ಪದಕಗಳನ್ನು ಗೆದ್ದಿರುವ ಕುಮಾರಿ ಲೇಖನ ಮಲ್ಲಿಕಾರ್ಜುನ ಹೆಗ್ಡೆ ಅವರು ಇತ್ತೀಚೆಗೆ ಮಿಸ್ ಯೂನಿವರ್ಸ್ ಕರ್ನಾಟಕ – 2026 ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ಸಾಧನೆಗೆ ಗೌರವ ಸೂಚಕವಾಗಿ, ಕರ್ನಾಟಕದ ಮುಖ್ಯಮಂತ್ರಿ Siddaramaiah ಅವರು ಹಾಗೂ ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ರವರು ಇಂದು ಬೆಂಗಳೂರಿನ ಸಿಎಂ ಕಚೇರಿ ಕೃಷ್ಣದಲ್ಲಿ ಕುಮಾರಿ ಲೇಖನ ಹೆಗ್ಡೆ ಅವರನ್ನು ಸನ್ಮಾನಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಗಳು ದೊರಕಲೆಂದು ಆಶೀರ್ವದಿಸಿದರು.
ಈ ಗೌರವವು ಕ್ರೀಡೆ ಮತ್ತು ಸೌಂದರ್ಯ ಸ್ಪರ್ಧೆ ಎರಡರಲ್ಲಿಯೂ ಲೇಖನ ಅವರ ಪ್ರತಿಭೆ ಹಾಗೂ ಪರಿಶ್ರಮವನ್ನು ಮತ್ತಷ್ಟು ಮೆರೆದಿದೆ.











