
ನವದೆಹಲಿ: 2019ರಲ್ಲಿ ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಲು ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಸರ್ಕಾರ 2,000 ರೂ ಹಣವನ್ನು ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಾ ಬಂದಿದ್ದು ಈವರೆಗೆ 16 ಕಂತುಗಳ ಹಣವನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ.
ಇದೀಗ ರೈತರು 17ನೇ ಕಂತಿನ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. 16ನೇ ಕಂತಿನ ಹಣವನ್ನು ಸರ್ಕಾರ 2024ರ ಫೆಬ್ರುವರಿ 28ರಂದು ಬಿಡುಗಡೆ ಮಾಡಿದ್ದು 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 21,000 ಕೋಟಿ ರೂನಷ್ಟು ಹಣವನ್ನು ಸರ್ಕಾರ ವರ್ಗಾಯಿಸಿತ್ತು.ವರ್ಷಕ್ಕೆ ಮೂರು ಕಂತುಗಳಂತೆ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ 16ನೇ ಕಂತು ಬಿಡುಗಡೆ ಮಾಡಿದ್ದು 17 ನೆಯ ಕಂತು ಮೇ ಅಥವಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದ್ದು ಒಂದು ವೇಳೆ ಇಕೆವೈಸಿ ಮಾಡಿರದಿದ್ದರೆ ಕಳೆದ ಮೂರು ನಾಲ್ಕು ಕಂತುಗಳ ಹಣ ಬಾರದಿರುವುದಕ್ಕೆ ಇದೇ ಕಾರಣವಾಗಿದೆ.