32.5 C
Udupi
Wednesday, May 13, 2026
spot_img
spot_img
HomeBlog"ಹೆಣ್ಣು ಮಕ್ಕಳು ಓದುವ ಅಗತ್ಯವಿಲ್ಲ ಅವರು ನಾಲ್ಕು ಗೋಡೆಯ ಒಳಗೆ ಇರಬೇಕು": ವಿವಾದಾತ್ಮಕ ಹೇಳಿಕೆ ನೀಡಿದ...

“ಹೆಣ್ಣು ಮಕ್ಕಳು ಓದುವ ಅಗತ್ಯವಿಲ್ಲ ಅವರು ನಾಲ್ಕು ಗೋಡೆಯ ಒಳಗೆ ಇರಬೇಕು”: ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಮಿತಿಲೇಶ್ ತಿವಾರಿ

ಪಾಟ್ನಾ: ಬಿಹಾರದ ನೂತನ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಅವರ ಹೆಣ್ಣುಮಕ್ಕಳ ಶಿಕ್ಷಣ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. “ಹೆಣ್ಣು ಮಕ್ಕಳು ಓದುವ ಅಗತ್ಯವಿಲ್ಲ, ಅವರು ಮನೆಯೊಳಗೆ ಇರಬೇಕು” ಎಂದು ಹೇಳಿದ್ದು ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೋಪಾಲ್‌ಗಂಜ್ ಜಿಲ್ಲೆಯ ಬೈಕುಂತ್ಪುರ ಕ್ಷೇತ್ರದ ಬಿಜೆಪಿ ಶಾಸಕನಾಗಿರುವ ತಿವಾರಿ, ಹೆಣ್ಣು ಮಕ್ಕಳು ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸುವ ಬದಲು ಮನೆಯಲ್ಲೇ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ವರದಿಗಾರರೊಬ್ಬರು ಶಿಕ್ಷಣವು ಹೆಣ್ಣುಮಕ್ಕಳ ಹಕ್ಕು ಎಂದು ಪ್ರಶ್ನಿಸಿದಾಗ, “ಅವರು ತಮ್ಮ ಹಕ್ಕುಗಳನ್ನು ಸ್ವತಃ ಪಡೆಯುತ್ತಾರೆ” ಎಂದು ತಿವಾರಿ ಉತ್ತರಿಸಿದ್ದಾರೆ.

ಶಿಕ್ಷಕರಾಗಿದ್ದ ಮಿಥಿಲೇಶ್ ತಿವಾರಿ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದು, ಪಾಟ್ನಾದಲ್ಲಿ ತರಬೇತಿ ಸಂಸ್ಥೆಯನ್ನೂ ನಡೆಸುತ್ತಿದ್ದರು.

ತಿವಾರಿಯವರ ಹೇಳಿಕೆಗಳು ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಲುವಿಗೆ ವಿರುದ್ಧವಾಗಿವೆ. ವಿಶೇಷವಾಗಿ ಬಾಲಕಿಯರಿಗೆ ಸೈಕಲ್ ಯೋಜನೆ ಜಾರಿಗೆ ತಂದ ಬಳಿಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಾಜರಾತಿ ಹೆಚ್ಚಾಗಿತ್ತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page