ತಂಡದ ಸದಸ್ಯ, ಡಾ. ಗುರುಚರಣ್ ಅವರಿಂದ ನಿಟ್ಟೆ ಕಾಲೇಜಿನ “ಇಕೋ ಕ್ಲಬ್ ಉದ್ಘಾಟನೆ”

ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸಕ್ರಿಯ ಸದಸ್ಯರಾದ ಡಾ. ಗುರುಚರಣ್ ಅವರು ನೆಟ್ಟೆ ಕಾಲೇಜಿನಲ್ಲಿ ಆಯೋಜಿಸಲಾದ ಇಕೋ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರಿಸರ ಸಂರಕ್ಷಣೆ ಹಾಗೂ ಯುವಜನರ ಪಾತ್ರದ ಕುರಿತು ಪ್ರೇರಣಾದಾಯಕ ಸಂದೇಶವನ್ನು ನೀಡಿದರು.
ನಮ್ಮ ಸದಸ್ಯರು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪರಿಸರ ಹಾಗೂ ಸಾಮಾಜಿಕ ಸೇವೆಯ ಸಂದೇಶವನ್ನು ಹರಡುತ್ತಿರುವುದು ಸ್ವಚ್ಛ ಕಾರ್ಕಳ ಬ್ರಿಗೇಡ್‌ಗೆ ಹೆಮ್ಮೆಯ ಸಂಗತಿಯಾಗಿದೆ.
ಸ್ವಚ್ಛ ಪರಿಸರ – ಸುಂದರ ಭವಿಷ್ಯ































































































































