26.7 C
Udupi
Saturday, April 25, 2026
spot_img
spot_img
HomeBlogಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್ ಸೇರಿದಂತೆ 53 ಔಷಧಗಳು ಗುಣಮಟ್ಟ ಕಳಪೆ: ಸಿಡಿಎಎಸ್‌ಸಿಒ ಎಚ್ಚರಿಕೆ

ಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್ ಸೇರಿದಂತೆ 53 ಔಷಧಗಳು ಗುಣಮಟ್ಟ ಕಳಪೆ: ಸಿಡಿಎಎಸ್‌ಸಿಒ ಎಚ್ಚರಿಕೆ

ನವದೆಹಲಿ: ಸಾಮಾನ್ಯ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್‌, ಮಧುಮೇಹ, ರಕ್ತದೊತ್ತಡ, ವಿಟಮಿನ್‌ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದು ಈ ಪೈಕಿ ಕೆಲವು ಔಷಧಗಳ ವಿಷಪೂರಿತವಾಗಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಘಟನೆ ತನ್ನ ಮಾಸಿಕ ವರದಿಯಲ್ಲಿ ಎಚ್ಚರಿಸಿದೆ.

ಪ್ರತಿ ತಿಂಗಳು ವಿವಿಧ ಔಷಧಗಳ ಮಾದರಿ ಪರೀಕ್ಷೆ ನಡೆಸಿ ಅವುಗಳ ಗುಣಮಟ್ಟದ ಕುರಿತು ವರದಿ ಬಿಡುಗಡೆ ಮಾಡುವ ಸಿಡಿಎಎಸ್‌ಸಿಒ ಇದೀಗ ಹೊಸ ವರದಿ ಬಿಡುಗಡೆ ಮಾಡಿದ್ದು ಇದರನ್ವಯ, ವಿಟಮಿನ್‌ ಸಿ, ವಿಟಮಿನ್‌ 3 ಗುಳಿಗೆಗಳಾದ ಶೇಲ್‌ಕಾಲ್‌, ವಿಟಮಿನ್ ಬಿ ಕಾಂಪ್ಲೆಕ್ಸ್‌, ವಿಟಮಿನ್‌ ಸಿ ಸಾಫ್ಟ್‌ಜೆಲ್ಸ್‌, ಆ್ಯಂಟಿಆ್ಯಸಿಡ್‌ ಪಾನ್‌ ಡಿ, ಪ್ಯಾರಾಸಿಟಮಾಲ್‌ ಐಪಿ 500 ಎಂಜಿ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಗ್ಲಿಮ್‌ಪಿರೈಡ್‌, ಅಧಿಕ ರಕ್ತದೊತ್ತಡಕ್ಕೆ ಬಳಸುವ ಟೆಲ್ಮಿಸಾರ್ಟಾನ್‌ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.

ಈ ಔಷಧಗಳನ್ನು ಹೆಟಿರೋ ಡ್ರಗ್ಸ್‌, ಆಲ್ಕೆಮ್‌ ಲ್ಯಾಬ್‌, ಹಿಂದೂಸ್ತಾನ್‌ ಆ್ಯಂಟಿಬಯಾಟಿಕ್ಸ್‌, ಕರ್ನಾಟಕ ಆ್ಯಂಟಿಬಯಾಟಿಕ್ಸ್‌ ಆ್ಯಂಡ್‌ ಫಾರ್ಮಾ ಲಿ., ಮೇಲ್‌ ಲೈಫ್‌ ಸೈನ್ಸೆಸ್‌, ಪ್ಯೂರ್‌ ಆ್ಯಂಡ್‌ ಕ್ಯೂರ್‌ ಹೆಲ್ತ್‌ಕೇರ್‌ ಮೊದಲಾದ ಸಂಸ್ಥೆಗಳು ಉತ್ಪಾದಿಸುತ್ತಿವೆ ಎಂದು ವರದಿ ತಿಳಿಸಿದ್ದು ಇನ್ನು ಆಲ್ಕೆಂ ಲ್ಯಾಬ್‌ನ ಕ್ಲಾವಂ 625 ಮತ್ತು ಪಾನ್‌ ಡಿ ಔಷಧಗಳು ವಿಷಪೂರಿತವಾಗಿದೆ ಎಂದು ಹೇಳಿದೆ. ಆದರೆ ವರದಿಯಲ್ಲಿ ವಿಷಪೂರಿತ ಎಂದು ಕಂಡುಬಂದ ಬ್ಯಾಚ್‌ನ ಔಷಧಗಳನ್ನು ತಾನು ಉತ್ಪಾದಿಸಿಲ್ಲ ಎಂದು ಕಂಪನಿ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page