33 C
Udupi
Wednesday, April 22, 2026
spot_img
spot_img
HomeBlogಸಾಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸೃಜನಶೀಲ ಕಾರ್ಯಕ್ರಮ

ಸಾಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸೃಜನಶೀಲ ಕಾರ್ಯಕ್ರಮ

ಸಮಯೋಚಿತ ಕಾರ್ಯಕ್ರಮ ಮಹಿಳಾ ಸ್ವಾವಲಂಬಿ ಯೋಜನೆಗೆ ಸಹಕಾರಿ – ಸುಧೀರ್ ನಾಯಕ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಕಳ ತಾಲೂಕು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸಾಣೂರು ವಲಯ ಚಿಂತನ ಜ್ಞಾನ ವಿಕಾಸ ದ 10 ಸದಸ್ಯರಿಗೆ ಸೃಜನಶೀಲ ಕಾರ್ಯಕ್ರಮ ದ ಮೂಲಕ ಒಬ್ಬರಿಗೆ 10 ರಂತೆ ಮಲ್ಲಿಗೆ ಗಿಡ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಸ.ಕಿ. ಪ್ರಾ.ಶಾಲೆ ಮುದ್ದಣ್ಣನಗರ ಇಲ್ಲಿಯ ಮುಖ್ಯ ಶಿಕ್ಷಕರಾದ ಸುಧೀರ್ ನಾಯಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ರಾಜ್ಯದಲ್ಲಿ ಅಭಿವೃದ್ದಿ ಹೊಂದಿದ ಅದೆಷ್ಟೋ ಮಹಿಳೆಯರ ಯಶೋಗಾಥೆಗಳನ್ನು ಕಣ್ಣಾರೆ ನೋಡಿದ್ದೇವೆ ಇಂದು ಆಯೋಜಿಸಿದ ಮಲ್ಲಿಗೆ ಕೃಷಿ ಗೆ ಪ್ರೇರಣೆ ನೀಡುವ ಕಾರ್ಯಕ್ರಮ ಸಮಯೋಚಿತ ಕಾರ್ಯಕ್ರಮ ಮಹಿಳಾ ಸ್ವಾವಲಂಬನೆಗೆ ಯೋಜನೆಯ ಸಹಕಾರ ಅಪಾರ ಇಂತಹ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಯಲಕ್ಷ್ಮಿ ಶೆಟ್ಟಿಗಾರ್ ರವರು ಮಲ್ಲಿಗೆ ಗಿಡ ನೆಡುವ ವಿಧಾನ, ಸಾಕುವ ವಿಧಾನ, ವರ್ಷದಲ್ಲಿ 2 ತಿಂಗಳು ಹೊರತು ಪಡಿಸಿ ಉಳಿದ ತಿಂಗಳಲ್ಲಿ ಆದಾಯ ಪಡೆವ ವಿಧಾನ ಕಾಲಗಳಿಗೆ ಅನುಗುಣವಾಗಿ ಗಿಡಗಳ ಪೋಷಣೆ ಬಗ್ಗೆ , ಹಾಗೂ ಮಲ್ಲಿಗೆ ಕೃಷಿ ಒಂದನ್ನೇ ಅವಲಂಬಿಸಿದರು ಕುಟುಂಬ ನಿರ್ವಹಣೆ ಗೆ ಕೊರತೆ ಬರದು ಇದೊಂದು ಉತ್ತಮ ಆದಾಯ ಕೊಡುವ ಕೃಷಿ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರಾಸ್ತಾವಿಕ ಮಾತನಾಡಿದರು. ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಮಾಧವ ಭಂಡಾರ್ಕರ್ ಹಾಗೂ ಜ್ಞಾನ ವಿಕಾಸದ ಸದಸ್ಯರು ಉಪಸ್ಥಿತಿ ಇದ್ದರು. ಸೇವಾ ಪ್ರತಿನಿಧಿ ಅರುಣಿ ಸ್ವಾಗತಿಸಿದರು ವಲಯ ಮೇಲ್ವಿಚಾರಕರಾದ ಪ್ರಸಾದ್ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page