ಡಾ. ಸುರೇಶ್ ಶೆಟ್ಟಿ, ಉಪನ್ಯಾಸಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರು,ಬಲಿಪಗುತ್ತು ನಿಟ್ಟೆ

ರಸ್ತೆ ವಿಭಾಜಕದ ಕೊರತೆ, ಅಗತ್ಯದ ಸಮಯಗಳಲ್ಲಿ ಬಸ್ಸಿನ ಸಂಖ್ಯೆ ಗಳ ಕೊರತೆ ಇಲ್ಲಿನ ಜ್ವಲಂತ ಸಮಸ್ಯೆ ಗಳು. ಹಿಂದೆ ಓಡಾಡುತ್ತಿದ್ದ ಸರಕಾರಿ ಬಸ್ಸು ಗಳು ಏಕಾಏಕಿ ಕಣ್ಮರೆ ಆದದ್ದು ವಿಸ್ಮಯ. ಷರತ್ತು ಮೀರಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವ ಖಾಸಗಿ ಬಸ್ಸು ಗಳಿಗೆ ಮೂಗುದಾರ ಹಾಕಲು ಜಿಲ್ಲಾಡಳಿತ ಮುಂದಾಗಬೇಕಿದೆ.
ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ರಕ್ಷಣೆ ಮತ್ತು ಅವರಿಗೆ ಮೂಲಭೂತ ಸೌಕರ್ಯ ಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ಒದಗಿಸುವುದು ಅವರ ಜವಾಬ್ದಾರಿ ಮತ್ತು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರಕಾರದ ಮುಂದೆ ಒತ್ತಡ ತರಬೇಕಾಗಿ ವಿನಂತಿಸುತ್ತೇನೆ. ನಾವು ಈಗಾಗಲೇ ಈ ಬಗ್ಗೆ ಗಮನ ಸೆಳೆದಿದ್ದು ಸೂಕ್ತ ಸ್ಪಂದನೆ ದೊರೆತಿದೆ. ಇದನ್ನು ಕಾರ್ಯ ರೂಪಕ್ಕೆ ತರುವಲ್ಲಿ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಯಾಗುದಿಲ್ಲವೆಂದು ಆಶಿಸುತ್ತೆನೆ ಎಂದು ಡಾ. ಸುರೇಶ್ ಶೆಟ್ಟಿ, ಬಲಿಪಗುತ್ತು ಉಪನ್ಯಾಸಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರು, ನಿಟ್ಟೆ ತಿಳಿಸಿದ್ದಾರೆ.













