
ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ, ಕಾರ್ಕಳದಲ್ಲಿ ದಿನಾಂಕ 18/07/2026 ರಂದು ಪವಿತ್ರ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನವನ್ನು ಪಡೆಯುವ ಅಪರೂಪದ ಸೌಭಾಗ್ಯ ಲಭಿಸಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು,ಸದಸ್ಯರು,ಶಾಲಾ ಪ್ರಾಂಶುಪಾಲರು, ಶಿಕ್ಷಕ -ಶಿಕ್ಷಕೇತರ ವೃಂದದವರು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕರು, ಭಕ್ತರು ಹಾಗೂ ಅತಿಥಿಗಳು ಭಾಗವಹಿಸಿ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಪಡೆದು ದೈವಿಕ ಆಶೀರ್ವಾದವನ್ನು ಪಡೆದರು. ಈ ಪುಣ್ಯಮಯ ಕ್ಷಣವು ಎಲ್ಲರ ಜೀವನದಲ್ಲಿ ಅವಿಸ್ಮರಣೀಯ ಅನುಭವವಾಗಿ ಉಳಿಯಿತು.
ಭಗವಾನ್ ಶಿವನ ಕೃಪೆಯಿಂದ ಪ್ರತಿಯೊಬ್ಬ ಮಗುವಿನ ಜೀವನವು ಜ್ಞಾನ, ಆರೋಗ್ಯ ಹಾಗೂ ಸಂತೋಷದಿಂದ ತುಂಬಿರಲಿ. ಈ ದೈವಿಕ ಆಶೀರ್ವಾದವು ಪ್ರತಿಯೊಂದು ಕುಟುಂಬಕ್ಕೂ ಶಾಂತಿ, ಸಮೃದ್ಧಿ ಹಾಗೂ ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

















































