
ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ( ರಿ.) ಮತ್ತು ಮಹಿಳಾ ಮಂಡಲ ( ರಿ.) ಇದರ ಜಂಟಿ ಆಶಯದಲ್ಲಿ ದಿನಾಂಕ 11-09-2025ನೇ ಗುರುವಾರ ದಾನಿಗಳಾದಂತಹ ರಾಘವೇಂದ್ರ ಪ್ರಭು ಸಾಂತೂರು ಇವರ ನೆರವಿನಿಂದ ಪತ್ತೋಂಜಿಕಟ್ಟೆ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಮನವಿಯಂತೆ (2000Ltr) ನೀರಿನ ಟ್ಯಾಂಕನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ದೇವಾಡಿಗ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆಯಾದ ಶ್ರೀಮತಿ ರೂಪ ಹರೀಶ್ ಶೆಟ್ಟಿ ಯುವಕ ಮಂಡಲದ ಗೌರವ ಸಲಹೆಗಾರರು ,ಪದಾಧಿಕಾರಿಗಳು, ಮತ್ತು ಸದಸ್ಯರು ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಸದಸ್ಯರು,ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.





















































































