27.7 C
Udupi
Sunday, April 26, 2026
spot_img
spot_img
HomeBlogಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,

ಕಾರ್ಕಳ ರೋಟರಿ ಕ್ಲಬ್, ಶಾಲಾ ವತಿಯಿಂದ, ಶಿಕ್ಷಕರಿಗೆ ಗೌರವ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿನ ಸಹಾಯಕ ಶಿಕ್ಷಕಿ ವೀಣಾ ದೇವಾಡಿಗರನ್ನು ರೋಟರಿ ಕ್ಲಬ್ ರಾಕ್ ಸಿಟಿ ವತಿಯಿಂದ ಸೆ. 9ರಂದು ಸುಂದರ ಪುರಾಣಿಕ ಪ್ರೌಢಶಾಲೆ ಪೆರ್ವಾಜೆ ಯಲ್ಲಿ , ಇನ್ನೋರ್ವ ಸಹ ಶಿಕ್ಷಕಿ ವಿದ್ಯಾ ಶಶಿಧರ್ ಭಟ್ ಇವರನ್ನು ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ವತಿಯಿಂದ ರೋಟರಿ ಬಾಲ ಭವನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಸನ್ಮಾನಿತ ಶಿಕ್ಷಕಿಯರನ್ನು ಶಾಲಾವತಿಯಿಂದ ನಮ್ಮ ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರ ನಾಯಕತ್ವದಲ್ಲಿ ಮಗದೊಮ್ಮೆ ಸನ್ಮಾನಿಸಲಾಯಿತು. ಅದೇ ರೀತಿ ಈ ಮೊದಲು, ನಮ್ಮ ಶಾಲೆಯ ಹಿರಿಯ ಶಿಕ್ಷಕಿಯಾದ ಗೀತಾ ಪಿ ಭಂಡಾರಿ ಅವರನ್ನು ರೋಟರಿ ಕ್ಲಬ್ ರಾಕ್ ಸಿಟಿ ಕಾರ್ಕಳ ವತಿಯಿಂದ ಗೌರವಿಸಲಾಗಿತ್ತು. ಹಿರಿಯ ಶಿಕ್ಷಕಿ ಅನಿತಾ ವಜ್ರ ಕುಮಾರ್ ಇವರನ್ನು ಭಾರತ ಸ್ಕೌಟ್ ಅಂಡ್ ಗೈಡ್ಸ್, ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕಾರ್ಕಳ ಹಾಗೂ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಹಾಗೂ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ವತಿಯಿಂದ ಮಹಿಳಾ ದಿನಾಚರಣೆಯಂದು ಗುರುತಿಸಿ ಗೌರವಿಸಲಾಗಿತ್ತು. ಅದೇ ರೀತಿ ಸಹ ಶಿಕ್ಷಕ ಸುದರ್ಶನ್ ರವರನ್ನು ರೋಟರಿ ಕ್ಲಬ್ ರಾಕ್ ಸಿಟಿ ಕಾರ್ಕಳ ವತಿಯಿಂದ ಸುಂದರ ಪುರಾಣಿಕ ಪ್ರೌಢಶಾಲೆ ಪೆರ್ವಾಜೆ, ಸಹ ಶಿಕ್ಷಕ ಉಮೇಶ್ ರವರನ್ನು ರೊಟರಿ ಕ್ಲಬ್ ರಾಕ್ ಸಿಟಿ , ಕಾರ್ಕಳ ವತಿಯಿಂದ ಸುಂದರ ಪುರಾಣಿಕ ಪ್ರೌಢಶಾಲೆ , ಸಹ ಶಿಕ್ಷಕಿ ರುಮೈಜ ರವರನ್ನು ರೋಟರಿ ಕ್ಲಬ್ ಕಾರ್ಕಳ ವತಿಯಿಂದ ರೋಟರಿ ಬಾಲ ಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುತಿಸಿ ಗೌರವಿಸಲಾಗಿತ್ತು. ಇವರೆಲ್ಲರನ್ನು ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರ ನಾಯಕತ್ವದಲ್ಲಿ ಮತ್ತೊಮ್ಮೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮಾತೃ ಸಂಸ್ಥೆಯಲ್ಲಿ ಗೌರವಿಸಿ ಸನ್ಮಾನಿಸಲಾಗಿತ್ತು. ಈ ರೀತಿ ಸಮಾರ್ಪಣ ಮನೋಭಾವದಿಂದ ನಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲ ಏಳು ಮಂದಿ ಶಿಕ್ಷಕರನ್ನು ಸಾಮಾಜಿಕ ಕಳಕಳಿಯಿಂದ ರೋಟರಿ ಸಂಸ್ಥೆಯು ಗುರುತಿಸಿ ಗೌರವಿಸಿರುವುದು ಶ್ಲಾಘನೀಯವಾಗಿದೆ ಕಾರ್ಯಕ್ರಮವಾಗಿದೆ . ಇದಕ್ಕಾಗಿ ಕ್ಲಬ್ ನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ನಮ್ಮ ಸಂಸ್ಥೆಯು ಆಬಾರಿಯಾಗಿದೆ.
ಇತೀ ಜಗದೀಶ್ ಹೆಗ್ಡೆ ಮುಖ್ಯ ಶಿಕ್ಷಕರು ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page