
76ನೇ ವರ್ಷದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಎನ್ ಸಿ ಎಸ್ ಗ್ರೂಪ್ ಚಾರ್ಟೆಡ್ ಅಕೌಂಟೆಂಟ್ ನಿತೇಶ್ ಶೆಟ್ಟಿ ಇವರು ನೆರವೇರಿಸಿ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜನಪ್ರಿಯ ರೈಸ್ ಮಿಲ್ ಮಾಲಕರಾದ ಶ್ರೀ ಮಂಜುನಾಥ್, ವಿಜೇತ ವಿಶೇಷ ಶಾಲಾ ಅಧ್ಯಕ್ಷರು ರತ್ನಾಕರ್ ಅಮೀನ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ಭಗವತಿ ಗ್ರೂಪ್ ನ ಮುಖ್ಯಸ್ಥರು ಯುವರಾಜ್ ಕುಲಾಲ್, ಸಂದೇಶ್ ಶೆಟ್ಟಿ, ಬ್ಯಾಂಕ್ ಸಿಬ್ಬಂದಿ ಶಿವಾನಂದ ನಾಯಕ್, ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಉಪಸ್ಥಿತರಿದ್ದರು.

ಸಿ. ಎ. ನಿತೇಶ್ ಶೆಟ್ಟಿ ಇವರಿಗೆ ಶಾಲಾ ವತಿಯಿಂದ ಗೌರವ ಸಮರ್ಪಿಸಲಾಯಿತು. ಮಂಜುನಾಥ್ ಇವರು ಸಿಹಿತಿಂಡಿ ವಿತರಿಸಿದರು.
ಯುವರಾಜ್ ಕುಲಾಲ್ ಇವರ ವತಿಯಿಂದ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.
ವಿಶೇಷ ಶಿಕ್ಷಕಿ ಶ್ರೀಮತಿ ಶ್ರೀನಿಧಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ಕಾಂತಿ ಹರೀಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು ವಿಶೇಷ ಶಿಕ್ಷಕಿ ಕು.ಯಶೋಧಾ ವಂದಿಸಿದರು. ಪೋಷಕರು ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.






















