
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ವಿರುದ್ಧ ದಾಖಲಿಸಿರುವ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸಿದ 5ನೇ ಸಿಸಿಎಚ್ ನ್ಯಾಯಾಲಯವು ಇಬ್ಬರು ಅಧಿಕಾರಿಗಳಿಗೂ “ಒನ್ ಮಿನಿಟ್ ಅಪಾಲಜಿ” ಪುಸ್ತಕ ಓದುವಂತೆ ಸಲಹೆ ನೀಡಿ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಲಾಯಿತು.
ನ್ಯಾಯಾಧೀಶರಾದ ವಿಜಯ್ ಕುಮಾರ್ ಜಾಟ್ಲಾ ಅವರು ರೂಪ ಮತ್ತು ರೋಹಿಣಿ ಹಾಗೂ ಅವರ ಪರ ವಕೀಲರು ಹೊರತುಪಡಿಸಿ ಇತರರನ್ನು ಕೋರ್ಟ್ ಹಾಲ್ ನಿಂದ ಹೊರಗಡೆ ಕಳುಹಿಸಿ ವಾದ ವಿವಾದ ಆಲಿಸಿದರು.
ರೋಹಿಣಿ ಸಿಂಧೂರಿ ಇನ್ ಕೆಮರಾ ಪ್ರೊಸೀಡಿಂಗ್ ವಿಚಾರಣೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೂಪ ಸುಪ್ರೀಂ ಕೋರ್ಟ್ ನಲ್ಲಿ ಇನ್ ಕೆಮರಾ ಪ್ರೊಸಿಡಿಂಗ್ ನಿರಾಕರಿಸಿದರು.
ಇಬ್ಬರು ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳಾಗಿರುವ ನೀವು ನಿಮ್ಮ ಸಮಯ ಸಮಾಜಕ್ಕಾಗಿ ಮೀಸಲಿಡಬೇಕು. ಇಬ್ಬರು ಅಧಿಕಾರಿಗಳು ಪುಸ್ತಕ ಓದುವಂತೆ ಸಲಹೆ ನೀಡಿ ನ್ಯಾಯಾಧೀಶರಾದ ವಿಜಯಕುಮಾರ್ ಜಾಟ್ಲಾ ಅವರು ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದರು.


































