
ಕಾರ್ಕಳ: ತಾಲೂಕಿನ ರೆಂಜಾಳ ಗ್ರಾಮದ ಸರಕಾರಿ ಸಂಯುಕ್ತ ಪ್ರೌಢಶಾಲೆ ರೆಂಜಾಳದಲ್ಲಿ ಸೇವೆಸಲ್ಲಿಸುವ ವಿನಾಯಕ ನಾಯ್ಕರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತುಂಬೆ ಬೀಳು ಗ್ರಾಮದವರಾದ ಇವರು 2007 ನೇ ಸಾಲಿನಲ್ಲಿ ಮಂಡ್ಯ ಮದ್ದೂರು ನಿಂದ ಶಿಕ್ಷಕ ವೃತ್ತಿ ಆರಂಬಿಸಿದ್ದರು ಇವರು ರೆಂಜಾಳದ ಸಂಯುಕ್ತ ಪ್ರೌಢ ಶಾಲೆಯಲ್ಲಿ ಕಳೆದ 14 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ,ಕ್ರಿಯಾಶೀಲ ಭೋದನೆಯಿಂದ ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಪಡೆದಿದ್ದರು.
ಸ್ಥಳೀಯರ ಸಹಕಾರದಿಂದ 6.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಸಮಾಜ ವಿಜ್ಞಾನ ಡಿಜಿಟಲ್ ಲ್ಯಾಬ್ ಮೆಚ್ಚುಗೆ ಪಡೆದಿತ್ತು













