
ರಾಜ್ಯ ಸರ್ಕಾರದ ಮೂಢ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ನಾಯಕರ ಮೈಸೂರು ಚಲೋ ಪಾದಯಾತ್ರೆ,ಬೆಂಗಳೂರಿನಲ್ಲಿ ಆರಂಭಗೊಂಡು ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ,ಇಂದು ಮಂಡ್ಯ ಭಾಗದಲ್ಲಿ ಪಾದಯಾತ್ರೆ ನಡೆಯುತ್ತಿದ್ದು ಕಾರ್ಕಳ ಶಾಸಕ ವಿ,ಸುನಿಲ್ ಕುಮಾರ್ ರವರ ಜೊತೆಯಾಗಿ ಕಾರ್ಕಳದ ಬಿಜೆಪಿ ಕಾರ್ಯಕರ್ತರು ‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡರು
ಈ ಪಾದಯಾತ್ರೆಯಲ್ಲಿ ಕಾರ್ಕಳ ಬಿಜೆಪಿ ಕ್ಷೇತ್ರಧ್ಯಕ್ಷರಾದ ನವೀನ್ ನಾಯಕ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಬೋಳ ಶ್ರೀನಿವಾಸ್ ಕಾಮಾತ್, ವಿಖ್ಯಾತ್ ಶೆಟ್ಟಿ,ಹರೀಶ್ ಶೆಣೈ, ನಿರಂಜನ್ ಜೈನ್, ರಂಜಿತ್ ಕೌಡೂರು,ಪ್ರಖ್ಯಾತ್ ಜೈನ್, ಮಣಿರಾಜ್ ಶೆಟ್ಟಿ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು













