27.7 C
Udupi
Saturday, April 25, 2026
spot_img
spot_img
HomeBlogರಾಜ್ಯದ 2 ಕಡೆ ತುಪ್ಪ ಕಲಬೆರಕೆ: ತುಪ್ಪ ತಯಾರಿಕಾ ಘಟಕಕ್ಕೆ ನೋಟಿಸ್ ಜಾರಿ....

ರಾಜ್ಯದ 2 ಕಡೆ ತುಪ್ಪ ಕಲಬೆರಕೆ: ತುಪ್ಪ ತಯಾರಿಕಾ ಘಟಕಕ್ಕೆ ನೋಟಿಸ್ ಜಾರಿ….

ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾದ ತುಪ್ಪ ಕಲಬೆರಕೆ ವಿವಾದವಾಗುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಟೆಸ್ಟ್ ಮಾಡಿದಾಗ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ.

ಆಗಸ್ಟ್ ತಿಂಗಳಲ್ಲಿ ಆಹಾರ ಮತ್ತು ಸುರಕ್ಷತಾ ಇಲಾಖೆ ತುಪ್ಪವನ್ನ ಟೆಸ್ಟ್ ಮಾಡಿದ್ದು ರಾಜ್ಯಾದ್ಯಂತ 40 ಕಡೆ ಮಾದರಿ ಸಂಗ್ರಹಿಸಿ, ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ತುಪ್ಪ ಸೇಫ್ ಅಲ್ಲ ಎಂದು ತುಪ್ಪ ತಯಾರಿಕಾ ಘಟಕಕ್ಕೆ ಆಹಾರ ಮತ್ತು ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ.

ಇಲ್ಲಿಯ ತುಪ್ಪ ಸೇಫ್‌ ಅಲ್ಲ ಎಂಬ ವರದಿ ಬಂದಿರುವ ಕಡೆ 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂದು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ. ಈ ಬಗ್ಗೆ ಮೈಸೂರಿನ ಲ್ಯಾಬ್‍ನಲ್ಲಿ ಖಚಿತತೆಯ ಪರೀಕ್ಷೆ ನಡೆಯುತ್ತಿದೆ.

ದೇಶಾದ್ಯಂತ ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗಿದೆ ಎನ್ನಲಾದ ಕಲಬೆರಕೆ ತುಪ್ಪ ವಿವಾದ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯದ ನಂದಿನಿ ತುಪ್ಪ ಹೊರತುಪಡಿಸಿ, ಉಳಿದ ತುಪ್ಪಗಳನ್ನು ಟೆಸ್ಟ್ ಮಾಡಲು ಆರೋಗ್ಯ ಸಚಿವರು ಸೂಚಿಸಿದ್ದರು.

  • ತುಪ್ಪವನ್ನ ಒಂದು ಕೆಮಿಕಲ್‍ಗೆ ಅಳವಡಿಸುತ್ತಾರೆ.
  • ತುಪ್ಪವನ್ನ ಕೆಮಿಕಲ್‍ಗೆ ಹಾಕಿ 7 ದಿನ ಹಾಗೆಯೇ ಇಡುತ್ತಾರೆ.
  • ಕೆಮಿಕಲ್‍ಗೆ ಹಾಕಿದ ತುಪ್ಪ ಮೂರು ಬಣ್ಣಗಳಾಗಿ ಬದಲಾಗುತ್ತೆ.
  • ಕೆಂಪು, ಹಳದಿ, ಬಿಳಿ ಬಣ್ಣ ಬಂದರೆ ಅನ್‍ಸೇಫ್.
  • ಫ್ಯಾಟ್ ಪ್ರಮಾಣ 90% ದಾಟಿದ್ರೆ ಅನ್‍ಸೇಫ್.
  • ಎರಡು ಪ್ರದೇಶಗಳ ತುಪ್ಪದ ಫ್ಯಾಟ್ 90% ದಾಟಿದೆ.
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page