ಮರುದಿನವೇ, ಗುತ್ತಿಗೆದಾರನ ಮನೆಯ ಬಳಿ ಪತ್ರಕರ್ತನ ಶವಪತ್ತೆ ಮೂವರ ಬಂಧನ

ಮುಕೇಶ್ ಚಂದ್ರಾಕರ್ ರಸ್ತೆ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಮರುದಿನವೇ ಗುತ್ತಿಗೆದಾರನೊಬ್ಬನು ಮನೆಯ ಬಳಿ ಶವವಾಗಿ ಪತ್ತೆಯಾದ ಘಟನೆ ಛತೀಸಗಡದಲ್ಲಿ ವರದಿಯಾಗಿದೆ.
ಗುತ್ತಿಗೆದಾರರೊಬ್ಬರ ಭ್ರಷ್ಟಾಚಾರದ ಬಗ್ಗೆ ಮುಕೇಶ್ ವರದಿ ಮಾಡಿದ್ದು, ಮರುದಿನ ಛತೀಸಗಢದ ಬಸ್ತಾರ್ ವಿಭಾಗದಲ್ಲಿ ಗುತ್ತಿಗೆದಾರರ ಒಡೆತನದ ಶೆಡ್ನಲ್ಲಿನ ಸೆಪ್ಟಿಕ್ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಹೋದರ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಕೊಲೆಯ ಮಾಸ್ಟರ್ ಮೈಂಡ್ ಎನ್ನಲಾದ ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.































































































































