
ಕನ್ನಡ ಕಿರುತೆರೆಯ ಚಾರ್ಮಿಂಗ್ ಸ್ಟಾರ್, ಕನ್ನಡತಿ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ನಟ ಕಿರಣ್ ರಾಜ್ ಕಾರಿಗೆ ನಿನ್ನೆ ರಸ್ತೆ ಅಪಘಾತವಾಗಿದ್ದು ಪರಿಣಾಮ ಕಿರಣ್ ಗೆ ಗಂಭೀರ ಗಾಯಗಳಾಗಿವೆ.
ಕಿರಣ್ ರಾಜ್ ನಟನೆಯ ರಾನಿ ಸಿನಿಮಾ ರಿಲೀಸ್ಗೆ ಸಜ್ಜಾಗಿದ್ದು ಸಿನಿಮಾ ಪ್ರಚಾರಕ್ಕೆಂದು ಕಿರಣ್ ತುಂಬಾ ಪ್ರಯಾಣ ಮಾಡುತ್ತಿದ್ದರು.
ಸೆಪ್ಟೆಂಬರ್ 10ರಂದು ಕೆಂಗೇರಿ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿರುವಾಗ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಎದೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಬೆಂಗಳೂರು ಆಸ್ಪತ್ರೆ ಕೆಂಗೇರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಕಿರಣ್ ರಾಜ್ ಜೊತೆ ಕಾರಿನಲ್ಲಿ ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಕೂಡ ಇದ್ದು ಅವರು ಸೀಟ್ ಬೆಲ್ಟ್ ಹಾಕಿದ್ದ ಕಾರಣ ಸೇಫ್ ಆಗಿದ್ದಾರೆ. ಕಿರಣ್ ಸೀಟ್ ಬೆಲ್ಟ್ ಧರಿಸಿರುವ ಬಗ್ಗೆ ಸ್ಪಷ್ಟನೆ ಇಲ್ಲ.













